ಅವಳೇ... ಇವಳು ಕನಸಲಿ ಬಂದವಳು
ರಚನೆ : ಅರವಿಂದ ಸ್ವಾಮಿ ಮಂಜುಳ
----------------------------------
ಅವಳ ನೋಡಿದ ಮೇಲೆಯೂ ಹೇಗಿರಲಿ ಸುಮ್ಮನೆ, ಸೆಳೆಯುತಿರುವಳು ಸೂಜಿಗಲ್ಲಿನಂತೆ ದೂರದಿಂದಲೂ ನನ್ನನೆ. ನೆಪ ಹುಡುಕಿದೆ ಅವಳ ಜೊತೆ ಹೇಗಾದರೂ ಮಾತಾಡಲು ನಿತ್ಯ, ಎರಡೇ ಪದ ಅವಳ ಮಾತೃಭಾಷೆಯಂಬಂತೆ ನುಡಿದು ಮರೆಯಾಗುವಳು ಇದು ಸತ್ಯ. ಗಾದೇಲ್ ಹೇಳಿದ ಹಾಗೆಯೇ ಅವಳ ಮಾತು ಬೆಳ್ಳಿ,ಮೌನವೇ ಬಂಗಾರ, ಕಿವಿಗೆರಡು ಓಲೆ ಒಂದು ಬೊಟ್ ಕುಂಕುಮ ಸಣ್ಣ ಗುಳಿಕೆನ್ನೆ ನಗು ಇದೇ ಅವಳ ನಿತ್ಯದಲಂಕಾರ. ಬೆಳಗಿನ ಪಾಳಿಯ ಚಂದ್ರಮಳು ಅವಳೇನಾ ಎನ್ನುವ ಶಂಕೆ, ಮುಂಗುರುಳ ಸರಿಸುವುದ ನೋಡುವುದರಲ್ಲೇ ನನ್ನ ಈ ಹೃದಯ ನಿಲ್ಲುವಂತಾಗಿದೆ ಜೋಕೆ. ಅವಳ ಅಂದದ ನದಿಯ ಸುಳಿಯಲಿ ಮುಳುಗುತ್ತಿರುವೆ ಈಜಲಾಗದೇ ಮತ್ತೆ ಮತ್ತೆ, ಭುವಿಯ ನಿಲಿಂಪ ಅವಳು ಅಪ್ಪಿ ತಪ್ಪಿ ನಕ್ಕರೂ ಆ ಸ್ವರ್ಗವೇ ನನದಾಗುತ್ತೆ. ವಿಶ್ವದ ಎಲ್ಲಾ ಸುಂದರ ಸಂಗತಿಗಳೇ ಅವಳದಾಗಲಿ ಸ್ವಂತ, ಭಾವ ರಾಗ ತಾಳಗಳ ಮಹಾಸಂಗಮವೇ ಅವಳಲ್ಲೇ ಜೀವಂತ.
----------------------------------
ನೋಂದಣಿ ಐಡಿ : KPFS2-7169