ಭಾರತ ಮಾತೆ ಹೆಮ್ಮೆಯ ಪುತ್ರರು
ರಚನೆ : ಜ್ಯೋತಿ ಆನಂದ ಚಂದುಕರ
----------------------------------
ಧೀರ ವೀರ ಶೂರರು ನಮ್ಮ ನಾಡ ಯೋಧರು ಅಖಂಡ ದೇಶ ಪ್ರೇಮವ ದೇಶಕ್ಕೆಲ್ಲ ಸಾರುವರು ಕೆಚ್ಚೆದೆಯ ಯೋಧರು ಭಾರತಾಂಬೆ ಪುತ್ರರು ದೇಶ ಸೇವೆ ಈಶ ಸೇವೆ ಎಂದರಿತ ಮಹಾತ್ಮರು ಹಗಲು ರಾತ್ರಿ ನಮ್ಮ ರಾಷ್ಟ್ರೀಯ ಗಡಿಗಳನ್ನು ಕಾಯುವವರು ನಮ್ಮನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡುವವರು ಜೀವನವನ್ನು ಮುಡಿಪಾಗಿಡುವ ನಿಜವಾದ ದೇಶಭಕ್ತರು ಸೈನಿಕರು ನಮ್ಮ ದೇಶದ ನಿಜವಾದ ವೀರರು ರಾಷ್ಟ್ರದ ಸಂರಕ್ಷಣೆಗಾಗಿ ತಮ್ಮ ಬದುಕನ್ನು ಮುಡಪಾಗಿಟ್ಟವರು ಜನರ ರಕ್ಷಣೆಗೆ ತಮ್ಮ ಪ್ರಾಣವನ್ನೇ ದಾನ ಮಾಡುವವರು ನಿಜವಾದ ಸಮಾಜ ಸೇವಕರು ನಮ್ಮ ವೀರ ಸೈನಿಕರು ಸೈನಿಕರು ದೇಶದ ಶ್ರೇಷ್ಠ ಆಸ್ತಿಗಳಲ್ಲಿ ಒಬ್ಬರು
----------------------------------
ನೋಂದಣಿ ಐಡಿ : KPFS2-7140