Submission 3160

ಸಂತೆ

ರಚನೆ : ಡಾ. ಅನಿಲ್‌ಕುಮಾರ್ ಪಿ ಗ್ರಾಮಪುರೋಹಿತ್

----------------------------------

ಗದ್ದಲದ ಮಧ್ಯೆ ನಾನಿದ್ದೇನೆ ಯಾರ ಮಾತು ನನಗೆ ಕೇಳಿಸುತ್ತಿಲ್ಲ ನನ್ನ ಮಾತು ಯಾರಿಗೂ ಕೇಳುತ್ತಿಲ್ಲ ಜೀವನದ ಸಂತೆಯಲಿ ಗದ್ದಲ ಸಹಜ ಸಂತೆಯಲಿ ಎಲ್ಲ ತರಹದ ಜನರು ಉಡಾಳರಿಂದ ಹಿಡಿದು ಸಂತರವರೆಗೂ ಸರಕುಗಳೂ ತರಕಾರಿಯಿಂದ ತಂತ್ರಜ್ಞಾನದ ಆವಿಷ್ಕಾರಗಳವರೆಗೂ ಬೇಗ ಬಂದರೆ ನಿನ್ನ ಆಯ್ಕೆ ತಡವಾದರೆ ಉಳಿದಿದ್ದರಲ್ಲಿ ಆಯ್ಕೆ ಅನಿವಾರ್ಯ ಈಗಾಗಲೇ ಕೊಂಡ ಸಾಮಾನುಗಳಿಗಿಂತ ಮುಂದಿನ ಸಾಲಿನಲಿ ಇನ್ನೂ ಉತ್ಕೃಷ್ಟದ್ದು ಕಂಡರೆ ಅದು ನಿನ್ನ ದುರದೃಷ್ಟ ಏನು ಬೇಕೆಂದು ಮೊದಲೇ ನಿರ್ಧರಿಸಿದ್ದರೆ ಹಗುರ ಕಂಡದ್ದು ತಂದರಾಯಿತೆಂದುಕೊಂಡರೆ ಸಂತೆ ಮುಗಿದೀತೂ.

----------------------------------

ನೋಂದಣಿ ಐಡಿ : KPFS2-7138

1
Votes
108
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top