ಸುನಾಮಿಯಾಚೆಯ ದಿನ
ರಚನೆ : ರಕ್ಷಾ ಕ
----------------------------------
ಯಾರೋ ಬರೆದಿದ್ದೊಂದು ಹೆಸರು ಕಟ್ಟಿದ್ದೊಂದರಮನೆ, ಉಸುಕಲ್ಲಿ ಪುಟ್ಟ ಕಾಲಳತೆಯ ಗುಬ್ಬಚ್ಚಿ ಗೂಡು ಗೆಳತಿಗಾಗಿ ಮಾಡಿದ್ದೊಂದು ಶಂಖದ ಸರ ಅವಳ ಕೋಪದ ಕುರುಹಾಗಿ ಪವಡಿಸಿದೆಯಲ್ಲಿ.. ಐಸ್ಕ್ರೀಮು ಕಡ್ಡಿಯೊಂದು ಸಾರ್ಥಕ್ಯದಿ ಬಿದ್ದಿದ್ದು ಮಗುವೊಂದರ ನಗುವಿನ ಅವಶೇಷವಾಗಿ... ಸಾಮಾನ್ಯವಾದ ಕಡಲದಂಡೆಯ ನೋಟವಲ್ಲ ಸುನಾಮಿಯಾಚೆಯ ಮರಣ ಮೃದಂಗದಿ, ಜನ ಭಯದಿ ನರಳಿ, ಮರಳಿ ಮರಳಲಿ ಮರಳದೇ ಉಳಿದಿದ್ದೊಂದು ಖಾಲೀ ಸಮುದ್ರ.... ಭಣಗುಡುವ, ನಿರ್ಜನ ಕಡಲಡಿಯಲ್ಲಿ ಕಡುಗತ್ತಲಾದರೂ, ಬಣ್ಣ ಬಣ್ಣದ ಜಗತ್ತು ಭಣಗುಡುವ ನಿರ್ಜನ ಕಡಲ ತಡಿಯಲ್ಲಿ ಎಲ್ಲೆಲ್ಲೂ ಬೆಳಕು, ಆದರೆಲ್ಲ...ಕಪ್ಪು...ಬಿಳುಪು...
----------------------------------
ನೋಂದಣಿ ಐಡಿ : KPFS2-7131