Submission 3116

ಮನಸ್ಸಿನ ಮೌನಗನ್ನಡಿ.

ರಚನೆ : ಸುಮಿತ್ ಮೋಳಿ

----------------------------------

ಹುಡುಕಬೇಕಿದೆ ಈಗ ನನ್ನಲ್ಲೇ ನಾನು, ಕಳೆದುಹೋದ ಆ ನನ್ನ ಹಳೆಯ ವ್ಯಕ್ತಿತ್ವವನ್ನ. ಹುಡುಕಬೇಕಿದೆ ಈಗ ನನ್ನಲ್ಲೇ ನಾನು, ಕಳೆದುಹೋದ ಆ ನನ್ನ ಪ್ರೀತಿ ತೋರುವ ಹೃದಯವನ್ನ. ಹುಡುಕಬೇಕಿದೆ ಈಗ ನನ್ನಲ್ಲೇ ನಾನು, ಕಳೆದುಹೋದ ಆ ನನ್ನ ಮುಗ್ಧ ಮನಸನ್ನ. ಹುಡುಕಬೇಕಿದೆ ಈಗ ನನ್ನಲ್ಲೇ ನಾನು, ಕಳೆದುಹೋದ ಆ ನನ್ನ ಒಳಮನಸ್ಸಿನ ಸ್ನೇಹಿತನನ್ನ. ಹುಡುಕಲೇಬೇಕಿದೆ ಈಗ ನನ್ನಲ್ಲೇ ನಾನು, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಯಸುತ್ತಿದ್ದ ಆ ನನ್ನ ನಿಷ್ಕಲ್ಮಶ ಮನಸನ್ನ. ಆ ನನ್ನ ನಿಷ್ಕಲ್ಮಶ ಮನಸನ್ನ!

----------------------------------

ನೋಂದಣಿ ಐಡಿ : KPFS2-7105

19
Votes
197
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top