Submission 3096

ಒಂದಾಗಬೇಕಿದೆ ಭಾರತೀಯರೆಲ್ಲರು

ರಚನೆ : ರಾಮನಗೌಡ ಸಿದ್ದಣ್ಣ ಬಿರಾದಾರ

----------------------------------

ಮನಸ್ಸಿನೊಳಗಿನ ಕೊಳೆಯ ತೊಳೆಯುತಾ ಬುದ್ಧ ಬಸವ ಭೀಮ ರ ಹೆಜ್ಜೆಯೊಳಗೆ ಸಾಗುತ ನಾಡ ಮಣ್ಣಲಿ ಶಾಂತಿ ಸಮಾನತೆ ಸಾರುತಾ ಒಂದಾಗಬೇಕಿದೆ ಭಾರತೀಯರು ಒಂದಾಗಬೇಕಿದೆ. ಆಳುಗರ ಆಮೀಷಕ್ಕೆ, ಒಡೆದಾಳುವ ತಂತ್ರಕ್ಕೆ ಬಲಿಯಾಗದೆ, ಸಹೋದರತೆ ಸಹಬಾಳ್ವೆಯ ಸಾಮರಸ್ಯದ ಬದುಕಿಗಾಗಿ ಸ್ವಾತಂತ್ರ್ಯ, ಸಂವಿಧಾನದ ಆದರ್ಶಗಳಿಗಾಗಿ ದ್ವೇಷ, ವೈಷಮ್ಯ ದೂರವಿಟ್ಟು ವೀರರ ತ್ಯಾಗ ಬಲಿದಾನ ಸ್ಮರಣೆಯಲ್ಲಿಟ್ಟು ತಾಯಿ ಭಾರತ ಮಾತೆಯ ರಕ್ಷಣೆಗೆ ಅನ್ಯರ ಆಕ್ರಮಣ ಮೆಟ್ಟಿ ನಿಲ್ಲಲು ಒಂದಾಗಬೇಕಿದೆ ಭಾರತೀಯರೆಲ್ಲರು ಒಂದಾಗಬೇಕು ಜಾತಿಗಳು ಬೆರೆಸಿ ಬೆಸೆಯಬೇಕು ಮಾನವ ಬಂಧ ಧರ್ಮಗಳು ಒಗ್ಗೂಡಿಸಿ ಗಟ್ಟಿಗೊಳಿಸಬೇಕು ರಾಷ್ಟ್ರಧರ್ಮ ದೇಶದೇಶಗಳು ಬೆರೆತು ಸಾರಬೇಕು ವಿಶ್ವಮಾನವತೆ ಒಂದಾಗಬೇಕು ಭಾರತೀಯರು ಒಂದಾಗಬೇಕು

----------------------------------

ನೋಂದಣಿ ಐಡಿ : KPFS2-7082

80
Votes
465
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top