Submission 3078

ಅವ್ಯಕ್ತರ ಗಮ್ಯ.

ರಚನೆ : ದಿನೇಶ್ ಸಿ

----------------------------------

ಹಗಲಿರುಳು ಸೆರೆಸಿಕ್ಕಿ, ಕಾಲಕ್ಕೆ ಕೊರಳೊಡ್ಡಿ ಗಾವುದವ ಹಿಂದಿಕ್ಕಿ, ತಲೆತಲೆಮಾರುಗಳ ತನಕ ಮನ್ನಿಸುತ ಬದುಕ. ಅನಾದಿ ಹಾದಿಯಲಿ ಸವೆಸಿದರು ನುಡಿಕೊಂದು ಕಂಬನಿಯ ಬಂಧುಗಳು. ಕಲ್ಲೊಳಗಿನ ದೇವರು ಇರಲಿಲ್ಲ ಮುಕ್ತಿಗೆ. ಯಾರದೋ ಅಹಂಗೆ ಕೊರಳೋಡ್ಡಿದರು, ಹರಿದ ನೆತ್ತರಿಗೆ ಸಮತೆಯ ಕುರುಹೆಲ್ಲಿ..? ನಾಥಕುಲ ಅನಾಥವಾಗಿ ಉಸಿರ ಚಲ್ಲಿದರು. ಉಳ್ಳವರ ಮನ್ವಂತರಕೆ ಇವರ ಕಪಾಲವಿಟ್ಟು ಹೂತು ಹೋದವರ ಬದುಕಾತು. ನಾಳೆಯ ಪಾಡೇನು ನುಡಿಕೊಂದು ಉಳಿಯುವುದೇ. ಇತಿಹಾಸಕೆ ಪುಟ ಭರ್ತಿಯಾ ಧಾವಂತ ಉಳಿದವರ ಮನವಲಿಸಿ ಗಮ್ಯದಾ ಕುಹುಕ ಹಂತಿಯಾಗುವರೆ ಹರಿದು ಮುಕ್ಕುವ ಮುನ್ನ ಗೊರಿಯೊಳಗೆ ಕೇಳಿದರೇನು ಕ್ರಾಂತಿಯ ಹೆಸರನ್ನ.

----------------------------------

ನೋಂದಣಿ ಐಡಿ : KPFS2-7068

1
Votes
120
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top