Submission 3062

ಜೀವನದ ಹಾದಿ

ರಚನೆ : ಲಕ್ಷ್ಮಿ ರಮೇಶ್ ಪ್ರಭು

----------------------------------

ಜೀವನದ ಹಾದಿಯಲಿ, ಹೂವು ಮುಳ್ಳು ಸೇರುತವೆ, ಸಂತೋಷದ ನಗೆಗೀತೆ, ಕಣ್ಣೀರು ಕೂಡ ಬೆರೆತುತೆವೆ. ಕಾಲದ ನದಿಯ ಹರಿವಲಿ, ಕನಸುಗಳು ತೇಲುತಿವೆ, ಪ್ರತಿಯೊಂದು ತಿರುವಿನಲಿ, ಪಾಠಗಳು ಹೇಳುತಿವೆ. ಬೆಳಕು ಕತ್ತಲೆ ಮಿಶ್ರವಾಗಿ, ಬಣ್ಣದ ಚಿತ್ರ ಮೂಡಿಸುತ, ಆಶೆ ನಂಬಿಕೆ ಸೇರಿ, ಮನದ ದಾರಿಯನ್ನು ತೋರಿಸುತ. ಸಾಧನೆಯ ಬೆಟ್ಟ ಏರಲು, ಧೈರ್ಯವೇ ಬಲವಾಗಲಿ, ವಿಫಲತೆ ಸಿಕ್ಕರೂ ಅದು, ಗೆಲುವಿನ ಪಾಠವಾಗಲಿ. ಸ್ನೇಹ ಪ್ರೀತಿಯ ನೆರಳಲಿ, ಹೃದಯವು ಅರಳಲಿ, ದಯಾ ಕರುಣೆಯ ಹೂವಲಿ, ಮಾನವತೆ ಬೆಳಗಲಿ. ನಮ್ಮ ನಡಿಗೆಯ ನಾದದಲಿ, ಶಾಂತಿಯು ಹಾಡಾಗಲಿ, ಹೃದಯದ ಸತ್ಯ ಹಾದಿಯಲಿ, ಜೀವನವು ನಲಿಯಲಿ.

----------------------------------

ನೋಂದಣಿ ಐಡಿ : KPFS2-7055

27
Votes
215
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top