Submission 3060

ಬೆಳಕು.!

ರಚನೆ : ಶಿವಲಿಂಗ ಅಂಬುಲಗಿ

----------------------------------

ಉಚ್ಛ ಬೆಳಕಿನ, ಸ್ವಚ್ಛ ಬೆಳದಿಂಗಳದು ಹೊರಟೆ ದೀಪದ ದೀವಟಿಗೆ ತೆಗೆದು ಗಾಳಿ‌-ಮಳೆ ಶುರುವಾಗುವ ಹೊತ್ತದು ಅರಿಯದ ದಾರಿಯಲಿ ಅಂಧ ಮೆರವಣಿಗೆ! ಕಾಲ ನೋವನು ಸಹಿಸುತ ನಡೆದು ಮನಸಿನಾರ್ಭಟವ ಬರದಂತೆ ತಡೆದು ಗುರಿಯ‌ ದಿಕ್ಕನು ಹುಡುಕುತ ಹರಿದು ಹರಿದು ಬಂತದೋ‌ ನೆತ್ತರು! ಕತ್ತಲೊಡಲೊಳಹೊಕ್ಕು ನಗುತ ಬಂದು ನೋವು ನುಂಗಿದರೂ ಕಟ್ಟೆಯೊಡೆದು ಹರುಷದ ದಾರಿಯಲಿ ಸೋಲ ಮೆರೆದು ಸೇರಿಸಿತೆನ್ನ ಪಾತಾಳಕೆ.! ಹೇಳದೆ ಕಾರಣ‌ ಹೊರಟೆನಂದು ಅರಿಯದಾದೆನು ಮನೆಗೋ.. ಮಸಣಕೋ.!

----------------------------------

ನೋಂದಣಿ ಐಡಿ : KPFS2-7054

0
Votes
137
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top