ಜನನಿ
ರಚನೆ : ಶಿಲ್ಪಾ ಕೆ
----------------------------------
ಮನಸಿಗಂಟಿದ ಬಣ್ಣ ಅವಳು ಮಾಸುವುದುಂಟೇ ನಾ ಅಳಿವವರೆಗೂ... ಬದುಕಿಗಂಟಿದ ವರ ಅವಳು ನನ್ನ ನಾ ಮರೆತರೂ, ಮರೆಯಳು ಅವಳು ಒಮ್ಮೊಮ್ಮೆ ಗೊಣಗುವಳು ಮತ್ತೊಮ್ಮೆ ಗದರಿಸುವಳು ಮಗದೊಮ್ಮೆ ಮುದ್ದಿಸಿ, ಕೈತುತ್ತು ಕೊಟ್ಟವಳು ಭೂಮಿತೂಕದ ವಾತ್ಸಲ್ಯದ ತೇರವಳು ಸಾಗರಗಾತ್ರದ ಕ್ಷಮಾಮಯಿ ಅವಳು ಅವಳ ಪ್ರೀತಿಗೆ ಉಂಟೇ ಸರಿಸಾಟಿ ! ಪದಗಳಿಗೆ ನಿಲುಕದ ದೈವೀ ಸ್ವರೂಪಳು ಈ ಜಗದ ತೊಯ್ದಾಟವನೆಲ್ಲಾ ತೊರೆದು ಅರೆಗಳಿಗೆ ಅವಿತಿರಲೇ ನಿನ್ನೊಡಲಲಿ !
----------------------------------
ನೋಂದಣಿ ಐಡಿ : KPFS2-7046