ಕೊಲ್ಲದಿರಿ ನನ್ನ
ರಚನೆ : ಅಣಬೇರು ತಾರೇಶ್ ಕೆ. ಪಿ.
----------------------------------
ನನ್ನನೇಕೆ ಕೊಲ್ಲುವಿರಿ ನಾನು ಒಂದು ಹೆಣ್ಣು? ಮಾತೆ, ಮಡದಿ, ಮಗಳಾಗಿ ಮನೆಯ ಬೆಳಗುವೆನು. ನಾನೆಂದೂ ಬೇಡಲಿಲ್ಲ ಹೆಣ್ಣಾಗಿ ಹುಟ್ಟಿಸೆಂದು. ನನ್ನನೇಕೆ ಕೊಲ್ಲುವಿರಿ ನಾನೊಂದು ಹೆಣ್ಣೆಂದು? ತಾಯ ಮಮತೆ ಧಾರೆ ಎರೆದು, ನೋವಲು ನಲಿವ ತರುವೆ. ಕಷ್ಟ ಸುಖದಿ ಬಾಳ್ವೆ ಮಾಡೋ ಧೈರ್ಯವನ್ನ ಕಲಿಸುವೆ. ಕೊಲ್ಲದಿರಿ ನಾನೊಂದು ಹೆಣ್ಣೆಂದು. ಮುಂದಿನ ಮನುಜ ಕುಲಕೆ ಭ್ರೂಣ ಹತ್ಯೆ ಶಾಪ ತಟ್ಟಿ, ಜಗವೇ ನಾಶವಾದೀತು.
----------------------------------
ನೋಂದಣಿ ಐಡಿ : KPFS2-7045