ಅರ್ಥವಿಲ್ಲದ ಮದುವೆ
ರಚನೆ : ಅಭಿಷೇಕ್ ಎಸ್
----------------------------------
ಅವಳನ್ನು ಅವಳಂತೆ ಬಿಡಿ ಖರೀದಿಸಲು ವಸ್ತುವಲ್ಲ, ಮಾರಲು ಸಂತೆಯಲ್ಲ. ಹೂವಿಗೂ ಜೀವವಿದೆ ಒಂದು ದಿನದ ಮಟ್ಟಿಗೆ, ಆದರವಳಿಗೆ ಜೀವನವಿದೆ ಉಸಿರು ನಿಲ್ಲುವವರೆಗೆ. ನಿತ್ಯ ಸಾಯುತ್ತಿಹಳು ಅರ್ಥವಿಲ್ಲದ ಬಂಧನದಲ್ಲಿ, ಒಲವಿಲ್ಲದ ಬಲೆಯಲ್ಲಿ, ಬೆತ್ತಲಾಗಿವೆ ಕನಸುಗಳು ಕತ್ತಲೆಯಲ್ಲಿ. ಮಾತಾಡದೆ ಕಾಮದ ಬವಣೆ ತೀರಿಸಲು ಅರ್ಥವಿಲ್ಲದ ಮದುವೆಯಲ್ಲಿ. ಯಾರೋ ಬರೆದ ಘಳಿಗೆ, ಗಣಗಳು ಕೂಡಿ ಬೆರೆತವು. ಮನಗಳು ಮನಸ್ಥಿತಿ ಅರಿಯದೆ, ಒಲವಿಲ್ಲದೆ ಬೆರೆತು ದೂರಾದವು. ಆದರೆ... ಈ ಅರ್ಥವಿಲ್ಲದ ಮದುವೆಯಲ್ಲಿ ಒಂಟಿಯಾಗಿದ್ದು ಮಾತ್ರ ಏನರಿಯದ ಆ ಪುಟ್ಟ ಕಂದಮ್ಮ. ಅರ್ಥವಿಲ್ಲದ ಮದುವೆ, ಅರ್ಥವಿಲ್ಲದ ಬದುಕು...
----------------------------------
ನೋಂದಣಿ ಐಡಿ : KPFS2-7009