Submission 3000

ವೇಶ್ಯೆಯು ಪಾಶದಲಿ

ರಚನೆ : ಕೆ.ಎನ್.ರೀನಾ

----------------------------------

ಕತ್ತಲೆಯ ಮರೆಯಲ್ಲಿ ಭಯವಿಹುದು ಸ್ಪರ್ಶದಲಿ ಮತ್ತದೇ ದಿನರಾತ್ರಿ ಕೂಗಾಟ ಕೇಳುತಲಿ ಹೆತ್ತವರು ತಿಳಿದಿಲ್ಲ ಹೃದಯ ಹಿಂಡುವ ಬೇಲಿ ನೆತ್ತರಿನ ಕಲೆಯೆಲ್ಲ ಉಗುರಗೀರೆಂಬಲ್ಲಿ ಹೇಮಳಂತಿಹಳಲ್ಲ ಅದೇ ಅವಳಿಗೆ ಮುಳ್ಳು ಕಾಮಕೇಳಿಯ ಆಟ ಭಾವನೆಯು ಬರಿಜೊಳ್ಳು ನಾಮಕ್ಕೆ ಅವಳಾರೊ ಹೆಣ್ಣಾಗಿ ಬದಿಗವಳು ಪಾಮರಳು ಜಗದಲ್ಲಿ ಬೆಳಕನ್ನು ತಡಕುವಳು ತೊಡಕುಗಳು ಮನದೊಳಗೆ ತನಗಾಗಿ ಬದುಕಿಲ್ಲ ಮಿಡುಕಾಡೊ ಚಿತ್ತದಲಿ ಚಿತೆಯಿದ್ದು ದ್ಯುತಿಯಿಲ್ಲ ಹೊಡದಾಡೊ ಸಾಹಸವು ಹೇಗೆಂದು ತಿಳಿದಿಲ್ಲ ನಡೆದಾಡೊ ಹುಲ್ಲಂತೆ ಅವಳ ತನು ಹೊರಗೆಲ್ಲ

----------------------------------

ನೋಂದಣಿ ಐಡಿ : KPFS2-7003

35
Votes
289
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top