Submission 2998

ಕರ್ನಾಟಕ : ಒಂದು ರಾಜ್ಯ, ಹಲವು ಜಗತ್ತು

ರಚನೆ : ರಶ್ಮಿ. ಎನ್.ಡಿ

----------------------------------

ಧರೆಗಿಳಿದ ಮಳೆಗೆ ಸಡಗರವಿಂದು! ಕರುನಾಡಿನ ಕಡಲೂರಿಗೆ ಸೇರುವೆನೆಂದು.. ಕಡಲಿನ ಒಡಲಲಿ ಮುತ್ತಾದೆನೆಂದು! ಹರ್ಷದ ಅಲೆಯ ಹೊರಹಾಕಿದೆ ನಲಿದು.. ತಡವರಿಸದೆ ತಂಗಾಳಿಯ ತವರಿಂದು! ಮಲೆನಾಡಿನ ಮೈ ಸಿರಿಗೆ ಮಣಿದು... ಹಸಿರೆಲೆಯೊಡನೆ ಉಸಿರಾಗಿ ಮಿಂದು! ಜೋಗದಿ ಚಿಮ್ಮುವ ಹನಿಯಾಯಿತಿಂದು.. ಮನದ ಅಂತರಾಳದಿಂದ ಒಂದು! ಅಭಿಮಾನದ ಭಾವವಿಂದು.. ಶಿಲ್ಪ ಕಲೆಗಳ ಕಲ್ಪನೆಯ ಕಂಡು! ಮೊಗದಲಿ ಮುಗುಳುನಗೆಯಾಯಿತಿಂದು.. ಅರಿಶಿಣವಾಗಿ ಮುಗಿಲಲಿ, ಕುಂಕುಮವಾಗಿ ಕಡಲಲಿ ಬಾವುಟವಾಗಿ ಕನ್ನಡಿಗರೆದೆಯಲಿ! ಹಾರಲಿ..ನಲಿಯಲಿ..

----------------------------------

ನೋಂದಣಿ ಐಡಿ : KPFS2-7002

0
Votes
125
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top