ಮೋಕ್ಷ-ದೀಕ್ಷೆ
ರಚನೆ : ಸಂಜಯ್ ನಾಗರಾಜು ರಾಮೇನಹಳ್ಳಿ
----------------------------------
ಧಣಿಗೆ ಕೊಡೆ ಹಿಡಿದು ನೀ; ಬಿಸಿಲಿನಲಿ ನಡೆದೆ. ಧಣಿಗಳೇ ದೇವರೆಂದೆ; ನಮ್ಮನೆಲ್ಲಾ ಕಾಯ್ವರೆಂದೆ. ಮಾರಿಹುಣ್ಣಿನಿಂದ ನಿನ್ನ ಕೈ ಸೋತಾಗ ಮೈಯೆಲ್ಲಾ ಉರಿಯೆಂದು ದಾರಿಯಲಿ ಬಿದ್ದಾಗ “ಸತ್ರ-ಸಾಯ್ಲಿ ಬುಡಿ” ಪಂಚಮ ಎಂದರು. ಕೊಟ್ಟಿಗೆಯ ಕಸ ಬಳಿದು; ಹಟ್ಟಿಯಂಗಳ ತೊಳೆದು ಅವ್ರಹಟ್ಟಿ ಮಲಹೊತ್ತು; ದಣಿವರಿಯದೆ ಹೊಲವುತ್ತು ಜೀತ ಮಾಡಿದ ನೀನು ಪ್ರೇತಾತ್ಮವಾದೆ. ನಿನ್ನ ಶಾಂತತ್ವವು ನಮಗಿಲ್ಲಪ್ಪಯ್ಯ ನಿನ್ನ ಶವ-ಹೊತ್ತುರಿದ ಬೆಂಕಿ ನಮ್ಮದೆಯದು. ನಿನ್ನ ತಿಥಿಯೆಡೆಯ ಅವ್ರಹಟ್ಟಿಗಿಟ್ಟು; ಸೊಕ್ಕಿದುಳ್ಳವರ ಮೈಮೂಳೆ ಮುರಿದು ಕಿನ್ನುಡಿಯ ಮಾಡಿ ನುಡಿಸಿ; ನಾ ನಿನಗೆ ಮೋಕ್ಷವನ್ನುಕೊಡುವೆನು. ಶಿಕ್ಷಣ-ಸಂಘಟನೆ- ಹೋರಾಟದ ದೀಕ್ಷೆಯನು ಪಡೆವೆನು.
----------------------------------
ನೋಂದಣಿ ಐಡಿ : KPFS2-6990