Submission 2964

ತಾಯಿ ಭಾರತಿಗೆ ಕನ್ನಡದಾರತಿ

ರಚನೆ : ಎನ್. ಶಂಕರ ರಾವ್

----------------------------------

ತಾಯೆ ನಿನ್ನಯ ಒಲವ ಮಡಿಲಲಿ ಜನುಮ ಪಡೆದುದೆ ಪುಣ್ಯವು/ ಕಾಯೆ ನಮ್ಮನು ಚೆಲುವ ನಾಡಲಿ ಮತಿಯ ನಿತ್ತು ಅನುದಿನವು// ಸರ್ವ ಜನಾಂಗದ ಮನದಿ ಸಂತಸ ತರಲು ಅನುಗ್ರಹಿಸು// ಭವ್ಯ ಭಾರತದ ನೆಲದಿ ಜನಿಸುವ ಭಾಗ್ಯ ನೀಡಿ ಉದ್ಧರಿಸು// ಸಾಂಸ್ಕೃತಿಕ ಸಂಪತ್ತಿನ ಸಿರಿಯಲಿ ಶ್ರೀಗಂಧದ ತವರಿನ ಪರಿಯಲಿ/ ಸಿರಿಗನ್ನಡ ಸಿರಿತನದ ವೈವಿಧ್ಯಮಯ ಸೊಬಗಲಿ ಮೆರೆದಿದೆ ಕಲಾವಂತಿಕೆ ಕರುನಾಡಲಿ//. ಹಸುರಿನ ವನ ಖನಿಜದ ಶಿಖರಗಳಲಿ ಕಾವೇರಿ ಕೃಷ್ಣೆ ಶರಾವತಿ ನದಿ ನೀರಿನ ತಟದಲಿ/ ಕಲೆ ಸಾಹಿತ್ಯ ಸಂಗೀತ ನೃತ್ಯ ಸಂಸ್ಕೃತಿಯಲಿ ಶರಣ ದಾಸರ ಕವಿ ಕೋಗಿಲೆಗಳ ಬೀಡಲಿ ಕನ್ನಡ ನಾಡಲಿ//. ಪಾವನ ವಾಯಿತು ತನು ಮನ ಕನ್ನಡ ತಾಯಿಯ ಮಡಿಲಲಿ./

----------------------------------

ನೋಂದಣಿ ಐಡಿ : KPFS2-6989

37
Votes
530
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top