ನುಡಿ ಸಂಭ್ರಮ
ರಚನೆ : ದೀಪಾ ಕೆ ವಿ
----------------------------------
ಬಂತಿದೋ ನಮ್ಮ ರಾಜ್ಯೋತ್ಸವ ! ಕನ್ನಡಾಂಬೆಯ ಪಾದಕ್ಕಿದೋ ನಮನೋತ್ಸವ ! ನಮ್ಮಲ್ಲಿದೆ ಸಂಸ್ಕಾರ, ಮಾಡುವೆವು ಎಲ್ಲರಿಗೂ ಸತ್ಕಾರ ! ನಮ್ಮದು ಸುಂದರ ಸಂಸ್ಕೃತಿ, ಕಲಿಸಿದೆ ನಮ್ಮೀ ಪ್ರಕೃತಿ ! ರನ್ನ ಪಂಪ ಜನ್ನರ ನಾಡಿದು, ಕವಿ ಕುಮಾರವ್ಯಾಸರ ಬೀಡಿದು! ದಾಸ ವಚನಕಾರರ ರಸದೌತಣದ ಭಾಷೆಯಿದು, ಕವಿ ಶ್ರೇಷ್ಠರ ಕೊಡುಗೆಯಿದು ! ಬೆಳಗಿಸಿರುವರು ಗುರುಹಿರಿಯರು ಕನ್ನಡದ ದೀವಿಗೆ ! ಈ ದೀವಿಗೆಯ ನಂದಾದೀಪದಂತೆ ಬೆಳಗಿಸಬೇಕಿದೆ ನಾವೆಲ್ಲರೂ ಮುಂದಿನ ಪೀಳಿಗೆಗೆ ! ಸರ್ವರೂ ಕೈಜೋಡಿಸಿ ತಲೆಬಾಗಿಸಿ ನಮಿಸಿ ನಮ್ಮೀ ತಾಯಿ ಭುವನೇಶ್ವರಿಗೆ ! ಕೈ ಹಿಡಿದು ಕಾಪಾಡುವಳು ನಮ್ಮನ್ನು ಕೊನೆಯವರೆಗೆ !!
----------------------------------
ನೋಂದಣಿ ಐಡಿ : KPFS2-6975