ಪ್ರೀತಿಯಲ್ಲಿ ಕೊರತೆ ಕಂಡಾಗ
ರಚನೆ : ಪೂಜಾ ಎಂ
----------------------------------
ನನ್ನೆದೆಯಲಿ ಒಂದು ಕನಸಿನ ಊರಿದೆ. ಈ ಊರಿನಲಿ ನಿನ್ನದೇ ನೆನಪಿನ ಹಸಿರಿದೆ. ನೀ ಪ್ರೀತಿ ಕೊಟ್ಟಷ್ಟು ಹಸಿರು ಹೆಚ್ಚಾಗಲಿದೆ. ಹಸಿರು ಹೆಚ್ಚಾಗಿ ಊರು ವನವಾಗಲಿದೆ. ವನವಾಗಲೆಂದು ಈ ಜೀವ ಬಯಸಿದೆ. ಏಕೋ ಏನೋ.. ಇತ್ತೀಚೆಗೆ ಹಸಿರು ಮಾಗಿ, ಒಣಗುವ ಸ್ಥಿತಿ ತಲುಪಿದೆ. ಊರು ಬರಡಾಗುವ ಮುನ್ಸೂಚನೆ ನೀಡುತ್ತಿದೆ. ಬರಡಾಗುವ ಮುನ್ನ ಪ್ರೀತಿಯ ನೀರೆರೆದು ಉಳಿಸಿಕೊ, ನಿನ್ನದೇ ಊರಿನ ವನವಿದು. ಊರನ್ನು ವನವಾಗಿಸಿ, ಈ ಜೀವದ ಬಯಕೆಗೆ ಅರ್ಥ ಉಳಿಸಿಕೋ, ಏಕೆಂದರೆ ನಿನ್ನದೇ ನಿಷ್ಕಲ್ಮಶವಾದ ಪ್ರೀತಿಯಿದು...
----------------------------------
ನೋಂದಣಿ ಐಡಿ : KPFS2-6949