Submission 2904

ಕಪ್ಪು ನನ್ನ ತಪ್ಪೆ?

ರಚನೆ : ಪ್ರವೀಣಗೌಡ ಪಾಟೀಲ್

----------------------------------

ನೀ ಪೂಜಿಸೋ ಕೃಷ್ಣ ಕಪ್ಪು ದೇವಾಲಯದ ಎಲ್ಲ ವಿಗ್ರಹಗಳು ಕಪ್ಪು ಮಳೆ ಬರಿಸೋ ಮೋಡದ ವರ್ಣ ಕಪ್ಪು ಮನುಷ್ಯನ ಚರ್ಮ ಕಪ್ಪಾದರೆ ಅದು ಅವನ ತಪ್ಪೆ? ಬಿಳಿ ಸುಂದರಿಯ ಮುಂಗುರುಳು, ಕಣ್ ಕಾಡಿಗೆ ಕಪ್ಪು ದೃಷ್ಟಿ ಕಳೆಯಲು ಬೇಕು ದಾರ ಕಪ್ಪು ಹುಟ್ಟಿದ ಕೂಸಿಗೆ ಹಚ್ಚುವ ಪ್ರಥಮ ಬಣ್ಣ ಕಪ್ಪು ಸತ್ತ ಮೇಲೆ ದೇಹ ಸುಟ್ಟರು, ಹುಗಿದರೂ ಆಗುವದು ಕಪ್ಪು ಆಕಳು ಕಪ್ಪಾದರೆ ಹಾಲು ಕಪ್ಪೆ ನುಡಿದ ಒಬ್ಬ ವೇದಾಂತ ಬೆಳ್ಳಗಿರುವದೆಲ್ಲ ಹಾಲಲ್ಲಾ.. ಒಪ್ಪಲೇ ಬೇಕು ಈ ಸಿದ್ದಾಂತ ಹುಡುಗ ಕಪ್ಪಿದ್ದರು ಹುಡ್ಗಿ ಬಣ್ಣ ಇರಬೇಕು ಬಿಳಿ ವರ್ಣ ಜಾತಿ ನಿಂದನೆ ತಪ್ಪೆಂದು ನೀ ತಿಳಿ ಆ ಸೃಷ್ಟಿಕರ್ತನ ಸೃಷ್ಠಿ ಈ ಕಪ್ಪು ಬಿಳುಪು ಬಣ್ಣ ನೀ ಯಾಕೆ ಮಾಡುವೆ ಭೇದ ಭಾವ ಅಣ್ಣ

----------------------------------

ನೋಂದಣಿ ಐಡಿ : KPFS2-6948

10
Votes
199
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top