ಅವರವರ ಪರಿ ಅವರಿಗಷ್ಟೇ
ರಚನೆ : ಗೌರವ್ವ ಮುತ್ನಾಳ್
----------------------------------
ಹೂವಿನ ಹಂದರದಲ್ಲಿ ಅರಳಿದವರೆಷ್ಟೋ, ಮುಳ್ಳಿನ ಮಾಯೆಯಲ್ಲಿ ಸಿಲುಕಿದವರೆಷ್ಟೋ, ಇರುವುದರಲ್ಲಿ ಖುಷಿ ಪಟ್ಟವರೆಷ್ಟೋ, ಇರಲಾರದನ್ನು ಬಯಸಿದವರೆಷ್ಟೋ, ವಿದ್ಯೆಯೊಂದಿಗೆ ಬರಿಗೈಲಿ ಇರುವವರೆಷ್ಟೋ, ವಿದ್ಯೆಯಿಲ್ಲದೆ ಸಂಪಾದಿಸುವರೆಷ್ಟೋ, ತುಸು ಪ್ರೀತಿಗೆ ಹಂಬಲಿಸುವರೆಷ್ಟೋ, ಅತೀ ಪ್ರೀತಿಯ ತಿರಸ್ಕರಿಸಿದವರೆಷ್ಟೋ, ಮಕ್ಕಳಿಲ್ಲವೆಂದು ಕೊರಗಿದವರೆಷ್ಟೋ, ಮಕ್ಕಳಿದ್ದರು ಆಸರೆ ಇಲ್ಲದವರೆಷ್ಟೋ, ಹಸಿದ ಹೊಟ್ಟೆಯಲ್ಲಿ ಮಲಗಿದವರೆಷ್ಟೋ, ಊಟವಿದ್ದರು ತಿನ್ನದ ಸ್ಥಿತಿಯಲ್ಲಿರುವರೆಷ್ಟೋ, ಸ್ವರ್ಗದ ಸೋಫಾನ ಆನಂದಿಸಿದವರೆಷ್ಟೋ, ನರಕದ ನೆರಳನ್ನು ಕಂಡವರೆಷ್ಟೋ,
----------------------------------
ನೋಂದಣಿ ಐಡಿ : KPFS2-6935