Submission 2858

ಮಾಯದ ನೋಟ

ರಚನೆ : ರಾಕೇಶ್ ಮನುಗನಹಳ್ಳಿ

----------------------------------

ನೀ ನಕ್ಕರೆ ಸಾಕು ಜಗವು ನಿಂತಂತೆ, ಚಂದ್ರನೇ ನಾಚಿ ಮೋಡದಲಿ ಮರೆತಂತೆ. ಕಂಗಳ ಆಳದಲಿ ಕರೆಯೋಲೆ ಕಂಡೆ ನಾ, ಅಲ್ಲೇ ಸೆರೆಯಾದೆ ಮರೆತೆ ನನ್ನನ್ನೇ ನಾ. ರೇಷ್ಮೆ ಮುಂಗುರುಳು ಹಣೆ ಮೇಲೆ ಆಡಲು, ನನ್ನ ಎದೆಯ ಬಡಿತ ತಾಳವನ್ನೇ ತಪ್ಪಿತು. ಮಲ್ಲಿಗೆಯ ಪರಿಮಳ ನೀ ಸನಿಹ ಬಂದಾಗ, ಉಸಿರಾಟ ನಿಂತಿತು ಜಗವೇ ಮೌನವಾದಾಗ. ನಿನ್ನ ಪ್ರತಿ ಹೆಜ್ಜೆಯು ಸಂಗೀತದ ಸ್ವರದಂತೆ, ನನ್ನ ಮನದ ಅಂಗಳಕೆ ರಂಗೋಲಿ ಇಟ್ಟಂತೆ. ಮಾತನಾಡದೆಯೇ ಭಾವನೆಗಳ ಬಂಧನ, ಈ ಪ್ರೀತಿಯ ಆಟವೇ ಒಂದು ಸುಂದರ ಸ್ಪಂದನ. ನನ್ನೀ ಎದೆಯ ಅರಮನೆಗೆ ನೀನೆ ದೀಪ, ಕಣ್ತುಂಬಲು ಬಯಸುವೆನು ನಿನ್ನದೇ ರೂಪ.

----------------------------------

ನೋಂದಣಿ ಐಡಿ : KPFS2-6913

68
Votes
469
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top