ಕನ್ನಡ ತಾಯಿ
ರಚನೆ : ಗಣೇಶ್ ಬಿಳೇಕಲ್
----------------------------------
ನೆರಳನು ಕರುಣಿಸಿ ನುಡಿಯನು ನುಡಿಸಿದ ಭುವನೇಶ್ವರಿಗೆ ಸ್ವರಗಳ ನಮನ || ಗಾನಾಮೃತದಲಿ ಚರಣವ ತೊಳೆಯುವೆ ಹರಸು ಎನ್ನನು ಭಜಿಸುವೆ ಅನುದಿನ ||ಪ || ಕನ್ನಡ ವರ್ಣವು ಬಣ್ಣಿಸಲಸದಳ ಕನ್ನಡಾಂಬೆಯು ಕರುಣಾoಬುದಿಯು || ಕನ್ನಡ ನುಡಿಯಲಿ ಮುನ್ನುಡಿ ಬರೆಯುವ ತಾಯಿಯ ಋಣವು ಎನಗಿಹುದು ||೧|| ತೋಷಿಪ ಕನ್ನಡ ಶೋಷಿತ ವಾದರೆ ತೊಳಪದು ಮಾಸದು ಜಗದೊಳಗೆ ವಿಸ್ಮಯ ಲೋಕದ ಅಸ್ಮಿತೆ ಇವಳು ಬಾಳುವ ಮನಕೆ ಬೆಳಗುವ ದೀವಿಗೆ ||೨|| ಕೊರಳಿನ ದ್ವನಿಯಲಿ ಕನ್ನಡ ಸ್ಮರಿಸಿ ಮರು ಜನಿತವು ಜಾತಕದಲಿ ಬರೆದರೆ ಜನನವ ಬೇಡುವೆ ಈ ನೆಲದಿ || ೩||
----------------------------------
ನೋಂದಣಿ ಐಡಿ : KPFS2-6897