Submission 2818

ತಾಯಿಬೇರು

ರಚನೆ : ಸಿಂಧು ಭಾರ್ಗವ, ಬೆಂಗಳೂರು

----------------------------------

ಎಲ್ಲ ನೋವ ಮರೆತು ತಾಯಿ ಬೇರು ಕೊಟ್ಟು ನಿಲುವಳು ಸೊಲ್ಲನೆಲ್ಲ ಎದುರಿಸುತಲೇ ಹೂವು ಹಣ್ಣು ಬಿಡುವಳು.. ಕಟುಕ ಬಂದು ಕಡಿದರೂನು ಆತ್ಮಬಲವು ಕುಂದದು ತಾಯಿಬೇರಿನ ಶಕುತಿಯದುವೇ ಮತ್ತೆ ಚಿಗುರು ಕಾಣ್ವುದು.. ತಾಯಿ ಬೇರು ಬೇಕೇ ಬೇಕು ಮರವು ತಲೆಯ ಎತ್ತಲು ಮರೆತು ಕೂಡ ನೋಯಿಸದಿರು ನಿನ್ನತನವ ಮೆರೆಸಲು.

----------------------------------

ನೋಂದಣಿ ಐಡಿ : KPFS2-6883

14
Votes
241
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top