Submission 2790

ಹೆಜ್ಜೆ ಗುರುತು

ರಚನೆ : ಅರುಣ್ ಕುಮಾರ್ ಟಿ ಕೆ

----------------------------------

ತರಗೆಲೆಗಳಡಿಯಲ್ಲಿ ಮಿಂದಿ ಹೋದ ಮನಸ್ಸು ಬಿರುಗಾಳಿ ಬೀಸಿದೊಡೆ ಚದುರಿ ಛಿದ್ರವಾಯಿತೇ?! ನಡುರಾತ್ರಿ ಕತ್ತಲೆಯಲ್ಲಿ ಕಾಡಿಗೆ ಕಾಣದಷ್ಟು ಇಟ್ಟರೆ ಕಣ್ಣುಗಳಿಗೇನು ಮತ್ತಷ್ಟು ಅಂದ ತುಂಬಿತೇ?! ಅನುದಿನವು ತೋಳ್ಬಲವ ನಂಬಿ ನಡೆವ ಮನುಜ- ಮನ ಇದಯದ ಪಿಸುಮಾತನು ಆಲಿಸಿತೇ?! ಕ್ರೂರಪರದ ಮುಖವಾಡ ಬೆನ್ನ ಹಿಂದೆ ಹೊತ್ತು ನಡೆದು ಹಸ್ತಲಾಘವ ಚಾಚಿದೊಡೆ ಸ್ನೇಹಪರತೆ ಹೆಚ್ಚಿತೇ?! ಅತ್ತ-ಇತ್ತ ಸುತ್ತ-ಮುತ್ತ ಕಾಣದಿರ ನೋಡದಿರ ನಿಸರ್ಗದ ಮಡಿಲಿನ ಸಿಹಿ ಕಂಪನು ಸವಿಯದಿರ ಹೆಜ್ಜೆ ಗುರುತು ತರಗೆಲೆಗಳನ್ನು ಸಡಿಲಿಸಿ ಹೋದರೆ ಮನುವಿನ ಮನಸ್ಸು ಭಾರವಾಯಿತೇ? ಕುರುಡಾಯಿತೇ?

----------------------------------

ನೋಂದಣಿ ಐಡಿ : KPFS2-6864

0
Votes
89
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top