ನನ್ನಯ ಅಪ್ಸರೆ
ರಚನೆ : ಶಹಬಾಜ್ ಅಹ್ಮದ್
----------------------------------
ಜೀವನದ ಪಯಣದಲಿ ಅಪ್ಸರೆ ಕಂಡೇನು ನಾನಪ್ಸರೆ ಕಂಡೇನು.. ಬಾಡಿಗೆಯ ಮನೆಯಲ್ಲೂ ಅರಮನೆ ಕಂಡೇನು ನಾ ಸಿರಿಮನೆ ಕಂಡೇನು.. ಆ ಕಾಡಿಗೆಯ ಕಣ್ಣಲ್ಲಿ ತಂಪನು ಕಂಡೇನು ನಾ ಸಂಪನು ಕಂಡೇನು... ಆ ಕೋಗಿಲೆಯ ಕಂಠದಲಿ ಇಂಪನು ಕಂಡೇನು ನಾ ಕಂಪನು ಕಂಡೇನು.. ಅವಳು ಜೊತೆ ಇರುವಾಗ ರಾಜಾ ನಾನಿನ್ನು ನನಗ್ ಸಾಟಿ ಯಾರಿನ್ನು.. ಕಣ್ಣಯ ಮುಂದೆ ಅವಳ ನಗೆ ಸ್ವರ್ಗವೇ ಬೇಕೇನು? ಸ್ವರ್ಗಕೆ ಕಿಚ್ಚನು ಹಚ್ಚೇನು.. ಧೈರ್ಯದ ಮೂರ್ತಿ ಅವಳಂತೆ ಕಷ್ಟವು ನನಗೇನು? ಆ ಸ್ಪೂರ್ತಿಯೇ ಸಾಕಿನ್ನು...
----------------------------------
ನೋಂದಣಿ ಐಡಿ : KPFS2-6844