ನನ್ನಮ್ಮ
ರಚನೆ : ಸಿಂಚನ ಗೌಡ
----------------------------------
ತನ್ನೆಲ್ಲಾ ಕನಸ ಬದಿಗಿರಿಸಿದ ಕರುಣಾಮಯಿ ನನ್ನವಳು ನೋವುಗಳೆಲ್ಲ ಮಕ್ಕಳ ನಗುವ ನೋಡಿ ಮರೆತವಳು ತನಗೆ ಇಲ್ಲದಿದ್ದರೂ ಮನೆಯವರ ಇಷ್ಟ - ಕಷ್ಟ ಪೂರೈಸುವವಳು ಎಂದಿಗೂ ಮಕ್ಕಳ ಏಳಿಗೆ ಬಯಸಿದವಳು ನಗುವಳು - ಅಳುವಳು ತನಗೆ ತಾನೇ, ಸಮಾಧಾನ ಮಾಡಿಕೊಳ್ಳುವ ಹೂ ಮನಸಿನವಳು ಅರಿದ ಬಟ್ಟೆಯ ತೊಟ್ಟು ಹೊಸದು ಒಲೆದು ಕೊಡುವ ದೇವತೆಯವಳು ಬೇಡುವುದಕ್ಕೂ ಮುಂಚೆಯೇ ನನ್ನೆಲ್ಲಾ ಆಸೆ ಕನಸಿಗೆ ದಾರಿ ದೀಪವಾದಳು ಹೇಳಲು ಪದಗಳಿಗಿಲ್ಲ ಅಂಜಿಕೆ, ಅವಳು ಪ್ರೀತಿಯ ಮಗುಮನದವಳು ಪ್ರೀತಿ ತ್ಯಾಗ ವಾತ್ಸಲ್ಯದ ಮೂರುತಿ ಇವಳು ಕೋಟಿ ಕೊಟ್ಟರೂ ಸಿಗದ ಅಮೃತದ ಸೊಬಗಿವಳು ಎಷ್ಟೆಂದರೂ ಪ್ರೀತಿಯ ನನ್ನಮ್ಮ ಅವಳು
----------------------------------
ನೋಂದಣಿ ಐಡಿ : KPFS2-6789