ನನ್ನ ದೇವರು ಅಮ್ಮ
ರಚನೆ : ಸಿರಿ ಎಂ ಪಿ
----------------------------------
ಆಹಾ! ನೋಡಬನ್ನಿ ದಿನವಿಡೀ ದಣಿದು, ದುಡಿದು, ಮಗುವಿಗಾಗಿ ಸದಾ ಕಷ್ಟಪಡುವ ತಾಯಿಯನ್ನ! ಸದಾ ಮಗುವಿನ ಬೆಳವಣಿಗೆ ಮತ್ತು ಏಳಿಗೆಗೆ ಸಹಾಯಮಾಡುವ ತಾಯಿಯನ್ನ! ಆಹಾ! ನೋಡಬನ್ನಿ, ಮಗುವಿನ ಸೋಲನ್ನು ಒಪ್ಪದ, ಮಗುವಿನೊಂದಿಗೇ ಗಟ್ಟಿಯಾಗಿ ನಿಲ್ಲುವ ತಾಯಿಯನ್ನು! ಆಹಾ! ನೋಡಬನ್ನಿ, ತಾಯಿ ಮಗುವಿನ ಈ ಮಧುರ ಬಾಂಧವ್ಯವ! ಹೇಗಾದರೂ ಆಗಲಿ, ಸದಾ ಮಗುವಿನ ಸುರಕ್ಷತೆಗೆ ಹೋರಾಡುವ ತಾಯಿಯನ್ನ!
----------------------------------
ನೋಂದಣಿ ಐಡಿ : KPFS2-6788