Submission 2658

ಕಲಿಯುಗ

ರಚನೆ : ಪರಮಾನಂದ ಬಳ್ಳೊಳ್ಳಿ

----------------------------------

ಕಲಿಯುಗ ಇದು ಕಲಿಯುಗ, ಮಾನವೀಯತೆ ಕಳೆದುಹೋದ ಯುಗ.. ಕಾಲಕ್ಕೆ ತಕ್ಕಂತೆ ಮುಖ ಬದಲಿಸುವರು, ತಾವು ಮಾಡಿದ ತಪ್ಪು ಬೇರೆಯವರ ಮೇಲೆ ಹಾಕುವರು.. ದುಡ್ಡಿನ ಹಿಂದೆ ಓಡುತ್ತಾ, ಬಾಳಿನ ಅರ್ಥವನ್ನೇ ಮರೆತವರು... ಸ್ನೇಹಿತರಂತೆ ನಗುವರು ಮುಂದೆ, ಬೆನ್ನಿಗೆ ಚೂರಿ ಹಾಕುವರು ಕಾಣದ ಹಾಗೆ.... ಕಾಣದ ಹಾಗೆ ಮೋಸವ ಮಾಡಿ, ಒಳ್ಳೆಯವರಂತೆ ಮುಂದೆ ಬಂದು ಬುದ್ಧಿ ಹೇಳುವರು... ಪ್ರೀತಿ ಪ್ರೇಮದ ಹೆಸರಲ್ಲಿ, ಹೆತ್ತವರಿಗೆ ಮೋಸ ಮಾಡುವರು.. ಹಣದ ಆಸೆಗಾಗಿ ನೀತಿ ಮರೆತು, ಹೇಸಿಗೆ ತಿನ್ನುವರು ಲಜ್ಜೆ ಬಿಟ್ಟು...

----------------------------------

ನೋಂದಣಿ ಐಡಿ : KPFS2-6783

42
Votes
387
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top