Submission 2652

ಶ್ರಾವಣನ ಗಹನ

ರಚನೆ : ಕಾತ್ಯಾಯನಿ ಶರತ್

----------------------------------

ಶ್ರಾವಣನ ಮೊರೆಹೊಕ್ಕು ಗುನುಗಿರಲು ಭೂರಮೆ ಸಿರಿಯೆಲ್ಲ ಮೈದುಂಬಿ ಇಂದ್ರಲೋಕ ಆಷಾಢದೀ ಮಿಂದು ಹಸಿರುಟ್ಟ ಇಳೆಯ ಕಳೆ ಹೆಜ್ಜೆಯಿತ್ತಾ ತೆರದಿ ನಿತ್ಯನಾಕ ಒಲವ ಅರುಹುವ ನೆವದಿ ಉಕ್ಕಿ ಬಂದಳು ಯಮುನೆ ಕೃಷ್ಣನಾ ಸೇರುವುದೆ ಅವಳ ಗಮನ ಶಾಲ್ಮಲೆಯು ಧ್ಯಾನದಲಿ ಧೋ ಎಂದು ಅನವರತ ನೆನೆಯುವಳು ಹಗಲಿರುಳು ಶ್ರಾವಣನ ಗಹನ ಹಸಿರು ತೋರಣ ಹೊದ್ದ ಮನೆಯ ನಾಗಂತಿಕೆಯು ರಂಗವಲ್ಲಿಯ ಇಣುಕಿ ನೋಡುತಲೆ ಶ್ರಾವಣವು ನೀರೆಗೊಲವಿನ ದಾಹ ; ಚಾತಕಕೆ ಸ್ವಾತಿಯ ಮೋಹ ಕಾದುಕುಳಿತಳು ಭೂಮಿ ಭಗ್ನಪ್ರೇಮಿ

----------------------------------

ನೋಂದಣಿ ಐಡಿ : KPFS2-6779

0
Votes
100
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top