Submission 2650

ತಾಯಲ್ಲವೇ ನಮ್ಮನ್ನೆಲ್ಲ ಹೆತ್ತ ಹೆಣ್ಣು

ರಚನೆ : ಮಂಜುನಾಥ ರಾಮಯ್ಯ ಇಳಿಗೇರ್

----------------------------------

ತಾಯಲ್ಲವೇ ನಮ್ಮನ್ನೆಲ್ಲ ಹೆತ್ತ ಹೆಣ್ಣು, ಕಣ್ಣೀರು ಒರೆಸೋ ಕೈಗಳಲ್ಲವೇ ಬಾಳಿನ ಕಣ್ಣು. ನೋಯಿಸಬೇಡಿ ಅವಳ ಮನವ, ಕಾಡಿಸಬೇಡಿ ಅವಳ ತನುವ. ತುತ್ತು ನೀಡಿ ಬೆಳೆಸಿದ ಕೈಗಳ ಮರೆಯಬೇಡಿ, ಕೊನೆಗಾಲದಲ್ಲಿ ತುತ್ತು ಕೊಡಲು ಮರೆಯದಿರಿ. ಅನುಕ್ಷಣ ನೊಂದಿಕೊಳ್ಳುವಳು, ನಿನ್ನ ಆರೋಗ್ಯ ಕೆಟ್ಟರೆ, ನೀ ವ್ಯಥೆಪಟ್ಟರೆ. ನಿಮ್ಮ ನಗುವಿಗೆ ಹಂಬಲಿಸುವವಳು, ನಿಮ್ಮ ಏಳಿಗೆಗೆ ಶ್ರಮಿಸಿ-ಸಂತಸವ ಪಡುವವಳು. ಹೊನ್ನಿಗಿಂತ ಶ್ರೇಷ್ಠ, ಮಣ್ಣಿಗಿಂತ ಸ್ಪಷ್ಟ, ದೇವರಂತೆ ಭೂಮಿಯಲಿ ಜನಿಸಿದಳು. ವರವ ಕೇಳದೆ ಕೊಡುವವಳು, ತ್ಯಾಗಕೆ ಸಿದ್ಧಳು. ಬದುಕಲಿ ಎಲ್ಲ ನೋವ ತನ್ನೊಳಗೆ ನುಂಗುತ, ಎಲ್ಲವ ಮರೆಯುತ, ಮುನ್ನುಗುವಳು ಮಹಾತಾಯಿ. ಹೆಣ್ಣಲ್ಲವೇ ನಮ್ಮನ್ನೆಲ್ಲ ಹೆತ್ತವಳು, ಪ್ರೀತಿಯ ಸುತ್ತ-ಸುತ್ತುವಳು. ಭುವಿಯಲೀ ಎಲ್ಲೆಡೆ ಆವರಿಸಿದವಳು......

----------------------------------

ನೋಂದಣಿ ಐಡಿ : KPFS2-6778

103
Votes
582
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top