Submission 2642

ರಕ್ತದಲ್ಲಿ ಕನ್ನಡ

ರಚನೆ : ದೇವಿಕಾ.ತಂಶೆಟ್ಟಿ

----------------------------------

ಭೂಮಿಯ ಮೇಲೆ ಸ್ವರ್ಗದ ಮಹೋತ್ಸವ ಅದುವೇ ನಮ್ಮ ಕನ್ನಡ ರಾಜ್ಯೋತ್ಸವ ಕೋಲಾರದ ಗಣಿಯಲ್ಲಿ ಕನ್ನಡ ಪಂಪನ ಪದದಲ್ಲಿ ಕನ್ನಡ ಓಬವ್ವನ ಒನಕೆಯಲಿ ಕನ್ನಡ ರಾಯಣ್ಣನ ಕತ್ತಿಯಲ್ಲು ಕನ್ನಡ ಹಂಪಿಯ ಶಿಲೆಗಳಲ್ಲು ಕನ್ನಡ ನೋಡ ಬನ್ನಿರಿ ಕನ್ನಡದ ಥೇರು ಅಮೇರಿಕಾಕ್ಕೆ ಹೋದ್ರು ಮರೀಬೇಡ ನಿನ್ನ ಬೇರು ಹೆಮ್ಮೆಯಿಂದ ಹೇಳುವೆ ನಾನು ಕನ್ನಡದ ಕಂದ ಯಾವ ಭಾಷೆಗೆ ಕಡಿಮೆ ಇದೆ ಹೇಳಿ ಇದರ ಅಂದ...?? ಅರಿತವರಿಗೆ ಕನ್ನಡ ಅಮೃತ, ಇದಕ್ಕೆ ಕನ್ನಡಿ ಬೇಕಿಲ್ಲಾ ಕನ್ನಡ ಸಾಕಲ್ವಾ....?? ಶರಣರ ಸಂತರ ದಾಸರ ನಾಡು, ಅರಶಿಣಕುಂಕುಮದ ಬೀಡು ಭುವನೇಶ್ವರಿಯ ತವರೂರು, ಕರುನಾಡೇ ನಮ್ಮೂರು

----------------------------------

ನೋಂದಣಿ ಐಡಿ : KPFS2-6772

426
Votes
2,418
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top