Submission 2586

ಮರೆಯಲಾರೆ ಗೆಳತಿ

ರಚನೆ : ಅರ್ಪಿತಾ ಹಡಪದ್

----------------------------------

ಅಂದು ಕಾಡಿತು ಭಯ ನನ್ನನ್ನು ಎಲ್ಲಿ ಮರೆಯುವೆ ನಾ ನಿನ್ನನ್ನು. ಕಾಣದೂರಿಗೆ ಹೋಗುತ್ತಿರುವ ಬಸ್ಸೊಂದರಲ್ಲಿ ಪ್ರಯಾಣಿಕನು ನಾನು ಅದನ್ನೋಡಿಸುತ್ತಿರುವ ಮಾಲೀಕಳು ನೀನು..! ಪ್ರತಿ ದಿನ ನೋಡ ಬೇಕೆನಿಸುತ್ತಿದೆ ನಿನ್ನ ನೆನಪಿನ ಕನ್ನಡಿಯನ್ನು , ಬಿರು ಬಿಸಿಲಿಗೆ ಹೋಗಬೇಡ ನೀನು, ನಿನ್ನ ನೆನದು ನಾ ಬಿಟ್ಟ ಬಿಸಿಯುಸಿರು ತಾಕಿತು ನಿನಗಿನ್ನು ..! ಮರೆಯಲಾರೆ ನಮ್ಮಾ ಕಿತ್ತಾಟವನ್ನು ಮುನಿಸಲ್ಲೂ ಮನ ಸೆಳೆವ ಚೆಲುವೆ ನೀನು. ಕಂಬನಿ ಬಾರದಂತೆ ಕಾದೆ ನೀ ನನ್ನನ್ನು ಆದರೆ,, ನಿನ್ನನ್ನು ಅಗಲುವಾಗ ಸಾಗರದಂತೆ ಉಕ್ಕಿ ಬಂದ ಕಣ್ಣೀರಲ್ಲಿ ತೇಲಿ ಹೋದೆ ನಾನು ! ಈಗ ಅರಿವಾಯಿತು ಗೆಳತಿ ಇಷ್ಟೆಲ್ಲಾ ಮಾಡಿದ ನಿನ್ನನ್ನು ಹೇಗೆ ಮರೆಯಲಿ ನಾನಿನ್ನೂ

----------------------------------

ನೋಂದಣಿ ಐಡಿ : KPFS2-6733

604
Votes
2,370
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top