ಕನ್ನಡ ನಾಡಿನ ಕೀರ್ತಿ
ರಚನೆ : ಸೋನು ಬಿ.ಎಲ್.
----------------------------------
ಕೆಂಪು-ಹಳದಿ ಬಾವುಟ ಹಾರಿದೆ ಗಗನದಲಿ, ಕನ್ನಡ ತಾಯಿಯ ನಗೆ ಮೂಡಿ ಮನದಲಿ. ನಾಡು ನಿಂತಿದೆ ನಿನ್ನ ಹೆಸರಿನ ಶಕ್ತಿಯಲ್ಲಿ, ಮಾತೃಭಾಷೆಯ ಮಮತೆ ತುಂಬಿದೆ ರಕ್ತದಲ್ಲಿ. ಮಲೆ, ನದಿ, ಬೆಟ್ಟ, ತೋಟಗಳ ಸೊಬಗು, ಸಂಸ್ಕೃತಿಯ ಚೈತನ್ಯ ನಮ್ಮ ನಾಡಿನ ಹೊಳಪು. ಕಾವ್ಯ, ಸಂಗೀತ, ಯಕ್ಷಗಾನ ರಸ, ಕನ್ನಡ ನಾಡು – ಕಲೆಗಳ ಮಹಾ ಖಜಾನೆ ಬಸ. ನಿನ್ನ ಅಕ್ಕರೆಯಲಿ ಬೆಳೆದವು ಕನಸುಗಳು, ನಿನ್ನ ಪ್ರೇಮದಲ್ಲಿ ಅರಳಿದವು ಮನಸುಗಳು. ಎಂದೆಂದಿಗೂ ನಿನ್ನ ನಾಮ ಜಗದಲ್ಲಿ ಬೆಳಗಲಿ, ಜೈ ಕರ್ನಾಟಕ ಮಾತೆ - ನಿನ್ನ ಧ್ವಜ ಹಾರಲಿ!
----------------------------------
ನೋಂದಣಿ ಐಡಿ : KPFS2-6732