ಬತ್ತಲಾಗು
ರಚನೆ : ಅಕ್ಷತಾ ಶೆಟ್ಟಿ ಕಾರ್ಕಳ
----------------------------------
ಬತ್ತಲಾಗು ನಿನ್ನ ಯೋಚನೆಗಳನ್ನೆಲ್ಲಾ ಹರಿವ ನೀರಲಿ ತೇಲಿಬಿಟ್ಟು. ಎದುರಾಗು ಖಾಲಿತನದಿ ನೀನಾಗಿ ಬರಿ ನೀನು ನೀನಾಗಿ. ಏನಿಹುದು ನಿನ್ನಲ್ಲಿ ಎಲ್ಲವನ್ನೂ ಬಿಟ್ಟು ಬರಿ ಮೂಳೆ ಮಾಸದ ಒಬ್ಬಟ್ಟು. ಹರಿವ ನೀರಲಿ ಹರಿದು ಸುಡುವ ಅಗ್ನಿಯಲಿ ಸುಟ್ಟು. ಕಳೆದುಕೊಳ್ಳಲು ಏನಿಹುದು ನಿನ್ನನ್ನು ಬಿಟ್ಟು.
----------------------------------
ನೋಂದಣಿ ಐಡಿ : KPFS2-6692