ನೀಲಿ ಪರದೆ ಬೆಳಕು
ರಚನೆ : ರಾಮಚಂದ್ರ ಬೆಣಕಲ್
----------------------------------
ಸುತ್ತಲೂ ಗಾಢ ಮೌನ, ಕೈಯಲ್ಲಿ ನೀಲಿ ಬೆಳಕು, ಲಕ್ಷ ಧ್ವನಿಗಳಿದ್ದರೂ, ಹೃದಯಕ್ಕಿಲ್ಲ ಕರೆ ಮತ್ತು ಹಳಕು. ಈ ಜಗವೇ ಒಂದು ದೊಡ್ಡ ಪರದೆಯಲಿ ಮಾಯವಾಗಿದೆ, ಕಣ್ಣು ತೆರೆದಿದ್ದರೂ, ನಿಜವಾದ ನೆರಳು ದೂರವಾಗಿದೆ. ಅಂಕಿಗಳ ಸುರುಳಿಯಲಿ ದಿನಗಳು ಕಳೆದಿವೆ, ಪ್ರತಿಯೊಂದು ಲೈಕ್ ಹಿಂದೆಯೂ ದೂರ ಉಳಿದಿವೆ. ಮನಸ್ಸಿಗೆ ಬೇಕಾದ ನಿಜವಾದ ಸ್ಪರ್ಶ ಮರೆತಿದೆ, ಆ ಮಿಥ್ಯಾ ಮಿತ್ರರ ನಡುವೆ ಆತ್ಮ ಒಂಟಿಯಾಗಿದೆ. ಹಾಗಾಗಿ, ಈ ತಂತು ಜಾಲದ ಮಿಂಚು ಮಂದವಾದಾಗ, ನನ್ನ ನಿಜವಾದ ನೆಲೆಯು ನನಗೆ ತಿಳಿದಾಗ. ಈ ಪರದೆಯಾಚೆಗೆ ಸತ್ಯವಾದ ಬದುಕು ಇದೆ, ಕಾಲವೇನೋ ಕಳೆದುಹೋಗಿದೆ, ಮತ್ತೆ ಬೆಳಕಿಗೆ ಬರಬೇಕಿದೆ.
----------------------------------
ನೋಂದಣಿ ಐಡಿ : KPFS2-6689