Submission 2524

ಪ್ರೇಮ ಮಾರ್ದನಿಸಲಿ

ರಚನೆ : ಶ್ರವಣ ಪತ್ತಾರ

----------------------------------

ಇಳಿ ಸಂಜೆಯಲಿ ತಿಳಿ ಬಿಳಿ ಬಣ್ಣದ ದುಪ್ಪಟ್ಟಾ ತೊಟ್ಟು ಹಣೆಗೆ ಕಡು ನೀಲಿ ಬಣ್ಣದ ಚುಕ್ಕೆ ಬೊಟ್ಟಿಟ್ಟು ಬರುವಾಗ ನಿನ್ನ ಸೌಂದರ್ಯ ದುಪ್ಪಟ್ಟು. ಎಲೆ,ಹೂಗಳನು ಮೈಮೇಲೆ ಉದುರಿಸಿಕೊಂಡ ಈ ನಿಶ್ಯಬ್ದ ಹಾದಿಗೆ ನಿನ್ನ ಪಾದ ಸೋಕಿದ ಸಾಕ್ಷಿಯಾಗಿ ಗೆಜ್ಜೆಗಳೆರಡು ಝೇಂಕಾರ ಮಾಡುತಿರಲು, ನನ್ನ ಹೃದಯದ ಗತಿ ಏನಾಗಬೇಕು ನೀನೆ ಹೇಳು? ತುಸು ಮೆಲ್ಲ ಮೆಲ್ಲನೆ ಎದೆಯೊಳಗಿಳಿಯೆ ಗಿಳಿಯೆ ಇಳಿದು ಹಿತವಾಗಿ ತುಳಿದು ಬಿಡು ನಿಷ್ಕಾಮ ಪ್ರೇಮದ ಮುದ ಮರ್ದನವಾಗಲಿ ಗಗನ,ಕಾನನ ತುಂಬೆಲ್ಲಾ ಮಾರ್ದನಿಸಲಿ.

----------------------------------

ನೋಂದಣಿ ಐಡಿ : KPFS2-6687

0
Votes
109
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top