Submission 2474

ಮುಗಿಲು ಮತ್ತು ಚಂದಿರ

ರಚನೆ : ಕಾಂಚನಾ ಮೌನೇಶ್

----------------------------------

ತಿಳಿ ಮುಗಿಲ ತೊಟ್ಟಿಲಲ್ಲಿ ಲಾಲಿಯ ಹಾಡು ಹಾಡಿದವರು ಯಾರು.. ಚಂದಿರನು ತೇಲಾಡುತಿಹನು ಮುಗಿಲ ಸುತ್ತ ತಡೆವವರು ಇಲ್ಲ ಯಾರು... ತೆಂಗು ಕಂಗುಗಳು ಚಾಮರ ಬೀಸಿ ಜೊತೆಯಾದವು ಲಾಲಿಯ ಹಾಡಲ್ಲಿ ತಂಗಾಳಿಗೂ ಪಾಲು... ಬಣ್ಣ ಬಣ್ಣದ ರಂಗು ಚೆಲ್ಲಿದ ತಾರೆಗಳು ತೊಟ್ಟಿಲ ಮೇಲೇರಿದ ಕೌದಿಗೆಯ ಗತ್ತು ತೀರ ಸಾಗರದ ಅಲೆಗಳ ನಿನಾದ ತೊಟ್ಟಿಲಿಗೆ ಕಟ್ಟಿದ ಗಿಲಿಗಿಟಿಯ ದರ್ಬಾರು ಭೂ ತಾಯಿ ತಿಳಿ ಮುಗಿಲ ತೊಟ್ಟಿಲಿಗೆ ಇಣುಕಿಹಳು ತನ್ನ ಕಂದನ ನಿದ್ರೆಯಲ್ಲಿ ಜಗವೇ ಮರೆಯುವುದ ಕಾಣಲು.

----------------------------------

ನೋಂದಣಿ ಐಡಿ : KPFS2-6652

159
Votes
803
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top