Submission 2404

ಇರುವೆಯ ನೋಟ.

ರಚನೆ : ಅರುಣಾ

----------------------------------

ನಾ ಇರುವೆ ಯಾಗಿರುವೆ ಮನದಿ ಸಣ್ಣದಾಗಿ ಕೊರೆಯುವ ಶಬ್ಧದಿ ಆಚೆ ಈಚೆ ಏನೆಂದು ತಿಳಿಯುವ ಬರದಲೇ ಜೀವನವೆಂಬ ಗೂಡಿನ ತುತ್ತ ತುದಿಗೆ ತಲುಪಾಯಿತು ತಲೆಮಾರಿನ ಅರಿವಿನ ಮೊದಲೇ ನನ್ನೆಡಗಿನ ಒಲವು ನಿಂತಿತ್ತು ಎಂದಿನಂತೆ ನಾ ಬೆವರುಸುರಿಸುತ್ತ ಹೋದೆ ನನ್ನ ದುಡಿಮೆಗೆ ಕೊಂಕು ಬೀಳುತ್ತಾ ಹೋಯಿತು ಕಷ್ಟನಷ್ಟಗಳನ್ನು ಮೆಟ್ಟಿ ತಲೆ ಎತ್ತುವಷ್ಟರಲ್ಲಿ ಕಾಲ್ಕೆಳಗಿನ ಭಾರವನ್ನು ಹೆಚ್ಚಿಸಿದರು ಹಾವಭಾವಗಳಿಲ್ಲದೆ ಮನ ಮೌನಿಯಾಗಿಬಿಟ್ಟಿತ್ತು ಕಾಲಹರಿಯುವ ದಾರಿಯಲಿ ತಾನೂ ಹರಿದನು ತಲೆಮಾರಿಗೆ ಇರುವೆಯ ಬೆಲೆಯೇ ತಿಳಿಯಲಿಲ್ಲ ಈ ಹರಿಯುವ ನದಿಯ ತೊರೆಯಲ್ಲಿ ನಾ ಇರುವೆ ಯಾಗಿರುವೆ

----------------------------------

ನೋಂದಣಿ ಐಡಿ : KPFS2-6602

21
Votes
214
Views
1 Year
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top