Submission 2400

ಹೂವು

ರಚನೆ : ಸಿದ್ದು ಯ ಶಿವಾಪೂರ

----------------------------------

ಅರಳಿ ಬಾ ಹೂವೇ ಅರಳಿ ಬಾ ಮೊಗ್ಗಿಂದ ಹೊರ ಹೊಮ್ಮಿ ಬಾ ಜಗಕ್ಕೆಲ್ಲ ಕಂಪನ್ನು ಚೆಲ್ಲು ಬಾ ನಗುವದನ ಎಲ್ಲರಿಗೆ ತೋರು ಬಾ ಬಾರೆ ಬಾ ಹೂವೇ ಅರಳಿ ಬಾ ಒಂದು ದಿನದ ಬದುಕು ನಿನ್ನದು ನಗುವು ನಿನ್ನಲ್ಲಿ ತುಂಬಿ ತುಳಕಿಹುದು ಇದಕ್ಕೆ ಕಾರಣ ಏನು ಇಹುದು ಅದರ ಮರ್ಮ ತಿಳಿ ಹೇಳು ಬಾ ಮುಳ್ಳಿನ ಮೇಲೆ ನಿನ್ನ ಜನನ ಆದರೂ ಮುದಡಿಲ್ಲ ನಿನ್ನ ವದನ ನೋಡಿ ಪುಳಕವಾಯಿತು ನನ್ನ ಮನ ಆತ್ಮಸ್ಥೈರ್ಯದ ಗುಟ್ಟು ತಿಳಿಸು ಬಾ

----------------------------------

ನೋಂದಣಿ ಐಡಿ : KPFS2-6598

5
Votes
123
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top