Submission 2356

ಅರಳದೊಲವು

ರಚನೆ : ದೀಪಾ ಟಿ ಆರ್

----------------------------------

ಅವಳೆಂದರೆ ಅವನ ಮೈ ಮನವೂ ತಂಗಾಳಿ ತೀಡಿದ ರೋಮಾಂಚನ ಅವಳಿಗಾಗಿ ಆ ಕಂಗಳ ಹುಡುಕಾಟ ಹೇಳತೀರದ ಭಾವ ಬಂಧನ ಮೇಳೈಸಿ ಕೋಟಿ ಜನಗಳ ಜಾತ್ರೆ ನಿಲ್ಲದು ಅವಳಿಗಾಗಿ ಅವನ ಯಾತ್ರೆ ಹುಡುಕಿ ತರುವನು ಅಂತರಂಗದಿ ಹೃದಯದಂಗಳವ ಸೇರುವವರೆಗೂ ಹೇಳಿಹನು ಕೌತುಕದಿ ಒಲವ ಅರಿಯದೆ ಮನವಲ್ಲಿ ನೊಂದಾಗ ಮಾಂಗಲ್ಯ ಬಂಧದಿ ಒಮ್ಮೆ ಅವಳಲ್ಲಿ ನೊಂದು ಸೊರಗಿ ಸೋತಿದ್ದಳು ಮತ್ತೆ ಅರಳದೊಲವು ಅವಳಲ್ಲಿ ವಿಧವೆಯ ಪಟ್ಟಧರಸಿಯ ನೆಪದಲ್ಲಿ ಮತ್ತೆ ಅರಳದೊಲವು ಅವಳಲ್ಲಿ.

----------------------------------

ನೋಂದಣಿ ಐಡಿ : KPFS2-6560

84
Votes
561
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top