Submission 2354

ಉಳಿದವರ ಪಾಡೇನು?

ರಚನೆ : ಭೀಮರಡ್ಡಿ

----------------------------------

ಸುತ್ತಲು ಬೆಳಕು ಚೆಲ್ಲಿದ ಕೀರ್ತಿ ಬೆಂಕಿಯ ಬಳಿದ ಕೈಗಳ ಪಾಲಾದರೆ ಬತ್ತಿಯ ವಸೆದ ಕೈಗಳ ಪಾಡೇನು? ಎಣ್ಣೆಯ ಬಸಿದ ಕೈಗಳ ಪಾಡೇನು? ಗರ್ಭ ಗುಡಿಯಲಿ ನಮಿಸುವಾಗ ಮೊದಲ ಸಾಲು ಕಿರಿ ಬೆರಳಿಗಾದರೆ ದಾರಿಯ ತೋರುವ ತೋರ್ಬೆರಳ ಪಾಡೇನು? ಎಲ್ಲರ ಸೇರುವ ಹೆಬ್ಬೆರಳ ಪಾಡೇನು? ಎಲ್ಲ ಹೊಗಳಿಕೆ ಕೊನೆಗೆ ಬರುವ ರುಚಿಯ ಕೊಡುವ ಹಣ್ಣಿಗಾದರೆ ಹಣ್ಣ ಹೊತ್ತ ಕೊಂಬೆಯ ಪಾಡೇನು? ಮರವ ಹೊತ್ತ ಭೂಮಿಯ ಪಾಡೇನು?

----------------------------------

ನೋಂದಣಿ ಐಡಿ : KPFS2-6559

5
Votes
126
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top