ಮೌನವೇ ಭೂಷಣ
ರಚನೆ : ಶ್ರೇಯಾ ಎಂ
----------------------------------
ಮೌನವೆಂಬಭಾವಲಹರಿ ಮಾತಿಗೆ ಮೂಲಪ್ರಚೋರಿ ಮೌನವೇ ಮಹಾದ್ಯಾನದ ಮಣಿಕಾಂತ ಮಣಿರತ್ನ ನಿಶಬ್ದದ ನದಿಯಲ್ಲಿ ಹರಿಯುತ್ತಿದೆ ನವರಸದ ಪ್ರಯತ್ನ ನಿರಾಕಾರದ ನಾದದಲ್ಲಿ ನೃತ್ಯಸುವ ನಿರ್ವಾಣ ಮನೋಮಂಜರಿಯೊಳಗೆ ಮುಳುಗಿದ ಮೌನರಾಧನ ಆಳದ ಅಂತರಂಗದ ಆಂತರಿಕ್ಷವಾಣಿ ಅಲ್ಲಿ ಚಿಂತನೆ ಬೀಸುವ ಚೈತನ್ಯ ಪಾವನಿ ಶಬ್ಧದ ಸೀಮೆ ತಲುಪಲು ಶೂನ್ಯವೋ ದೇವತೆ ಅದರ ನೋಟದಲ್ಲಿದೆ ಅಕ್ಷರಗಳ ಅಮೃತತೆ ದನಿಯ ಹಿಂದಿನ ಧ್ಯಾನ ಉಸಿರಿನ ಶ್ರುತಿಗುಪ್ತ ಅಲ್ಲಿ ಸತ್ಯವು ತಂಗಿದೆ ಮೃದು ನಿಶಬ್ದದ ಆಪ್ತ ಪ್ರಜ್ಞೆಯ ಪಾರಿಜಾತ ಪುಷ್ಪವೊಳು ಪರಿಮಳ ಮೌನವೇ ಮಾತಿನ ಮೂಲ ಮನದ ಜೀವಾಳ ಅನಿರ್ವಚನೀಯ ಆನಂದದ ಅನಾದಿ ಕಾವ್ಯ ಮೌನವೇ ಪರಬ್ರಹ್ಮ ಮನಸ್ಸಿನ ಶಾಶ್ವತತೆ ಅತಿನವ್ಯ
----------------------------------
ನೋಂದಣಿ ಐಡಿ : KPFS2-6540