ಕನ್ನಡ ಸಾಕ್ಷರತೆ
ರಚನೆ : ಸುಹಾಸ್ ಎ ಪಿ
----------------------------------
ಅಕ್ಷರಗಳಲ್ಲಿ ಅತಿ ಸುಂದರ ಸರ, ನಮ್ಮ ಕನ್ನಡ ವರ್ಣಮಾಲಾಕ್ಷರ. ಅ ಆ ಇ ಈ ಏರಿಳಿತಗಳ ಸಪ್ತಸ್ವರ ನಾದ ಲೀಲೆಯ ಸಾರ. ಬಾಲ್ಯ ಯೌವನ ಮುಪ್ಪಿಗೂ ಸರಳ ಕಲಿಕೆಯ ಸ್ವರ್ಣಮಾಲೆ, ಕರುನಾಡ ಕಣ್ಣನಗಳ ಮುತ್ತಿನ ಮಾಯಾ ಲೀಲೆ. ಕಲಿ ಸಿರಿಗನ್ನಡ ನಲಿ - ಕಲಿ, ಕಲಿತು ಕನ್ನಡ ಬದುಕಲು ತಿಳಿ. ಅಕ್ಷರ ಕಲಿತರೆ ಆಗುವೇನಿ ಸುಜ್ಞಾನಿ, ಬಾ ಬಾ ಸರ್ ಎಂ ವಿ ರೀತಿ ವಿಜ್ಞಾನಿ. ಕುವೆಂಪು ಬೇಂದ್ರೆ ಕಾರಂತ ಮಾಸ್ತಿ, ಗೋಕಾಕ್ ಕಾರ್ನಾಡ್ ಕಂಬಾರ ಅನಂತ ಕನ್ನಡದ ಶ್ರೇಷ್ಠ ಆಸ್ತಿ. ಕನ್ನಡವೇ ಮನೆಮನ ಬೆಳಗುವ ಜ್ಯೋತಿ, ಕಲಿಯಬೇಕು ಭೇದ - ಭಾವವಿಲ್ಲದ ಜಾತಿ. ವಿದ್ಯೆ ಕಲಿತ ಬಾಳಾಗಲಿ ಮರ, ವಿದ್ಯೆ ರಹಿತ ಗೋಳಾಗಲಿ ನಶ್ವರ. ಕಟ್ಟೋಣ ಕೈಜೋಡಿಸಿ ಕನ್ನಡ ಮಹಾಗೋಪುರ, ತೆರೆಯೋಣ ಕನ್ನಡ ಹೆಗ್ಗಳಿಕೆಯ ಮಹಾದ್ವಾರ. ಓಡಿಸೋಣ ಅಜ್ಞಾನ ಅಂಧಾನುಕರಣೆಯ ಕತ್ತಲು ಜೋಡಿಸೋಣ ಪೋಗಿಸೋಣ ಕನ್ನಡ ಎತ್ತೆತಲು.
----------------------------------
ನೋಂದಣಿ ಐಡಿ : KPFS2-6531