ಕಾರ್ತಸ್ವರ ಕರ್ಣಾಟಕ
ರಚನೆ : ಕೀರ್ತನಾ ರಾಮಕೃಷ್ಣ ಹೆಗಡೆ
----------------------------------
ವಾಸ್ತುಶಿಲ್ಪ ವೈಭವಗಳ ವಾಸಸ್ಥಾನವಿದು, ವಿಜಯದಸರದ ವಾಡಿಕೆಯಂಕಣವಿದು.. ರಾಜಮನೆತನಗಳ ರೇಷ್ಮೆಯಬೀಡಿದು, ರಮಣೀಯತಾಣಗಳ ರತ್ನದನೆಲವಿದು.. ಪಯಸ್ವಿನಿಗಳ ಪುಣ್ಯಕ್ಷೇತ್ರವಿದು, ಪರಂಪರೆಗಳ ಪಾರಿತೋಷಕದನಾಡಿದು.. ಉದ್ಯೋಗದಿ ಉಜ್ವಲಾವಾಗುವನೆಲವಿದು, ಉತ್ತಮಜೀವನಕೆ ಉದ್ಯಾನವನವಿದು.. ಕಲೆಕಲಾತ್ಮಕಗಳ ಕೇಸರಿಯಿಳೆಯಿದು, ಕುಶಲೋಪರಿಯ ಕಿರೀಟದಮಹಿಮವಿದು.. ಭುವನೇಶ್ವರಿಯ ಭುವನಗಿರಿಯಿದು, ಬಾಳೆಂಬಹೊಂಬಾಳೆಗೆ ಬೆಳಕಿನೂರಿದು..
----------------------------------
ನೋಂದಣಿ ಐಡಿ : KPFS2-6529