Submission 2298

ರಾಮಾಯಣದ ರಾಗ

ರಚನೆ : ವಿದ್ಯಾ.ಎಂ.ಎಸ್

----------------------------------

ಅಯೋಧ್ಯೆಯಲಿ ಮೂಡಿತು ಧರ್ಮದ ಬೆಳಕು, ರಾಮನ ನಾಮದಲ್ಲಿ ತೇಲಿತು ಲೋಕದ ಒಲವು. ಸತ್ಯದ ಸಿಂಹಾಸನದ ಮೇಲೆ ಅವನು ನಿಂತ, ಅನ್ಯಾಯದ ಅಂಧಕಾರವನ್ನು ದೂರ ಮಾಡಿದ. ಸೀತೆಯ ಶುದ್ಧತೆ, ಹನುಮಂತನ ಭಕ್ತಿ, ಭರತನ ಪ್ರೀತಿ, ಲಕ್ಷ್ಮಣನ ಶಕ್ತಿ , ಇವೆಲ್ಲ ಸೇರಿ ನಿರ್ಮಿಸಿದ ಪವಿತ್ರ ಪಥ, ಮಾನವನ ಹೃದಯದಲ್ಲಿ ಮೂಡಿಸಿದ ನಿತ್ಯ ಸತ್ಯ ವನವನಲ್ಲಿ ನಡೆದ ಪಾದಚಿಹ್ನೆ ಇಂದು ಹೇಳುತಿವೆ, ಧರ್ಮವೇ ದಾರಿಯೆಂದು ಕಣ್ಣು ತೆರೆಸುತಿವೆ. ರಾವಣನ ಅಹಂಕಾರ ಹಾರಿತು ಗಾಳಿಗೆ, ರಾಮನ ಕರುಣೆ ಹರಡಿತು ವಿಶ್ವದಾಳಿಗೆ. ಕನ್ನಡನಾಡಿನ ಮಣ್ಣಿನಲ್ಲಿ ಪ್ರತಿಧ್ವನಿಸಲಿ, ರಾಮನ ನಾಮ, ಸೀತೆಯ ಪ್ರೇಮದ ಮೌಲ್ಯ ಅರಳಲಿ. ರಾಜ್ಯೋತ್ಸವದ ಹಬ್ಬದಲ್ಲಿ ನೆನಪಿಸೋಣ ನಾವೆಲ್ಲ, ರಾಮಾಯಣದ ಮಾರ್ಗವೇ ಜೀವನದ ಬೆಳಕು ಎಲ್ಲ.

----------------------------------

ನೋಂದಣಿ ಐಡಿ : KPFS2-6526

167
Votes
1,058
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top