Submission 2286

ಬಾರಿಸುವೆ ಕನ್ನಡ ಡಿಂಡಿಮವ

ರಚನೆ : ಯೋಗೇಶ್ ಹೆಚ್ ಪಿ

----------------------------------

ನವೆಂಬರ್ ಕನ್ನಡಿಗನಲ್ಲ ನಿತ್ಯ ಕನ್ನಡಿಗನೆಂದು ಕರುನಾಡ ಬಣ್ಣವ ಬಾನ ಮುಗಿಲಿಗೆರಿಸಿ ಬಾರಿಸುವೆ ಕನ್ನಡ ಡಿಂಡಿಮವ ಹಿಮಾಲಯದಿಂದ ಕನ್ಯಾಕುಮಾರಿಯವರೆಗಲ್ಲ ವಿಶ್ವದೆಲ್ಲೆಡೆ ಕನ್ನಡ ಕಂಪ ಹರಡಿ ಬಾರಿಸುವೆ ಕನ್ನಡ ಡಿಂಡಿಮವ ಪಂಪನಿಂದಲ್ಲ ಜಾನಪದದ ಬದುಕಿನ ಪದವಾಗಿ ಕನ್ನಡಾಂಬೆಯ ಸಂಕೊಲೆಯ ಬಿಡಿಸಿ ಬಾರಿಸುವೆ ಕನ್ನಡ ಡಿಂಡಿಮವ ಪ್ರಶಸ್ತಿ ಗೌರವ ಪುರಸ್ಕಾರದಿಂದಲ್ಲ ಕನ್ನಡತನದಿಂದ, ಕನ್ನಡ ಬಾವುಟವ ಹಾರಿಸಿ ಬಾರಿಸುವೆ ಕನ್ನಡ ಡಿಂಡಿಮವ ಹಕ್ಕಿಗಳ ಕಲರವದಲ್ಲಿ, ಬೀಸುವ ಗಾಳಿಯಲ್ಲಿ ಸಾಗರದ ಅಲೆಗಳ ಆಚೆಯಲ್ಲಿ, ಎಲ್ಲದೆಲೆಯ ಮಿರಿ ಬಾರಿಸುವೆ ಕನ್ನಡ ಡಿಂಡಿಮವ

----------------------------------

ನೋಂದಣಿ ಐಡಿ : KPFS2-6511

9
Votes
113
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top