Submission 2284

ಪ್ರೀತಿಯೇ ಕೇಳು ಒಲವ ಪದಮಾಲೆ

ರಚನೆ : ನೇತ್ರಾವತಿ ಹೆಚ್ ಬಿ

----------------------------------

ಪ್ರೀತಿಯೇ ಕೇಳು ನಿನಗಾಗಿ ಪೋಣಿಸಿರುವೆ ಈ ಒಲವಿನಾಕ್ಷರದ ಪದಮಾಲೆಯನು ನಿನ್ನ ಹೃದಯದಲ್ಲಿ ಸಿಂಗರಿಸಿ ಸಮ್ಮತಿಸುವೆಯಾ ನಿನಗಾಗಿ ಕಾದಿರುವ ನಿನ್ನೀ ಅಲ್ಪನ ಹರಕೆಯನು ||ಪ|| ಇಬ್ಬನಿಯ ಸ್ಪರ್ಶಕ್ಕೆ ಪುಳಕಗೊಂಡ ಇಳೆಯಂತೆ ಕಂಬನಿ ಸುರಿಸಿ ಹಗುರಾದ ಮನದಂತೆ ಹಿಬ್ಬನಿ ಕರಗುತ ನೀರಾಗಿ ಮೂಡುವಂತೆ ನಿನ್ನ ಮುಂಗುರುಳು ತಾಕಿದ ಆ ಕ್ಷಣ ನನ್ನ ಮರೆತೆ ಜೀವ ಭಾವಗಳ ಸಮ್ಮಿಲನದಲಿ ನಾ ಬೆರೆತೆ ||ಚ|| ಕವಿಯಾಗಬೇಕೆನಿಸಿದೆ ನಿನ್ನ ಅಂತರಾಳದ ಸೆಳೆತದಲ್ಲಿ ಜಗಮರೆತು ಜೀವಿಸಬೇಕೇನಿಸಿದೆ ಪ್ರೀತಿಯ ರಾಗದಲ್ಲಿ ಬದುಕಿನುದ್ದಕ್ಕೂ ದಾಸನಾಗಬೇಕಿದೆ ನಿನ್ನ ಅನುರಾಗದಲ್ಲಿ ಪ್ರೀತಿಯ ಚಿಲುಮೆಗಾಗಿ ಹಂಬಲಿಸಿದೆ ಈ ಮನ ನಿನ್ನೆಜ್ಜೆಯ ಸಪ್ಪಳದೊಂದಿಗೆ ಸಾಗಬೇಕಿದೆ ನನ್ನೀ ಜೀವನ ||ಚ|| "ಮಾತು ಮೌನವಾದಾಗ"

----------------------------------

ನೋಂದಣಿ ಐಡಿ : KPFS2-6510

1
Votes
133
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top