ಕನ್ನಡ
ರಚನೆ : ಸಾತ್ವಿಕ ಶಿವರಾಮ ಭಟ್ಟ
----------------------------------
ಬದುಕಿನ ಬಣ್ಣ ಬದಲಾಯಿಸುವ ಭಾಷೆ, ವರ್ಣಿಸಲು ಬೇಕಿಲ್ಲ ಯಾವುದೇ ರೂಪುರೇಷೆ; ಕಡಲಿನಷ್ಟು ವಿಶಾಲವಿದರ ಸಮೃದ್ಧ ಸಂಪತ್ತು, ಒಂಟಿಸಲಗದಂತೆ ಆರ್ಭಟಿಸುತ್ತಿದೆ ತಡೆಹಿಡಿದು ಅಲೆಗಳ ವಿಪತ್ತು; ಶೋತೃಗಳ ಮನಕರಿಯದೆ ತಂಪೆರೆಯುವುದು ಕವನಗಳ ಮಾಯೆ, ಚಿರಕಾಲವಿರಲಿ ಹೀಗೇ ಕನ್ನಡದ ಛಾಯೆ; ಬರವಿಲ್ಲದಷ್ಟು ಕವಿಗಳು, ಕಲಿಕೆಗೆ ಸಾವಿರ ಕಲೆಗಳು, ಬೀಗುತ್ತಿದೆ ಇತಿಹಾಸದ ಹೆಮ್ಮೆಯ ಪುಟಗಳು; ಸಾಹಿತ್ಯ ಪ್ರಿಯರಿಗೆ ಎಲ್ಲೆಯೇ ಇಲ್ಲದ ರಸದೌತಣ, ಅಳಿಯದೇ ಉಳಿಯಲಿ ಇನ್ನಷ್ಟು ಶತಮಾನ; ಕೋಟಿ ಕಳೆದರೂ ಬದಲಾಗದು ಹಳದಿ ಕೆಂಪಿನ ಇಂಪು, ಬಳಸಿ ಬೆಳೆಸಬೇಕಿದೆ ಹರಡಿ ಎಲ್ಲೆಡೆ ಕನ್ನಡದ ಕಂಪು;
----------------------------------
ನೋಂದಣಿ ಐಡಿ : KPFS2-6497