ಹಾಸ್ಯಗಾರನಾದ ಬರಹಗಾರ
ರಚನೆ : ಸುಮುಖ ಬಿ ಕೆ
----------------------------------
ಬರಹದೊಳು ಕಲ್ಪನೆಯ ಹೊರಹಾಕುವ ಅನಾಮಿಕನು, ಅರಸುತ್ತಿರುವನು! ಸರಿಯಾದ ಪತ್ರ-ಲೇಖನಿಗಳನ್ನು, ಬರೆಯಲಿಚ್ಛಿಸಿಹನು! ಮನದ ಸಂಕೀರ್ಣ ಸಾಲುಗಳನ್ನು, ಅರಿಯಲಿಚ್ಛಿಸಿಹನು! ತಾನು ಕಂಡ ನೋಟದೊಳಗಿನ ಭಾವನೆಯನ್ನು! ಭಾವನೆಗಳ ಅರಿಯುತ್ತ, ನೋಟಗಳ ವಿಮರ್ಶಿಸುತ್ತ ಭಾವುಕನಾಗಿರುವನು! ಆ ನೋಟವ ನೆನಪಿಸಿಕೊಳ್ಳುತ್ತ, ನೋವು-ನಲಿವುಗಳೊಡನೆ, ಆ ಅಂತರ್ಮುಖಿಯು ನಗುತ್ತ ಜೀವಿಸಲೆತ್ನಿಸಹನು, ತಾನೊಬ್ಬ ಬರಹಗಾರನೆಂದುಕೊಳ್ಳುತ್ತ! ಕರಗದ ನೋವುಣ್ಣುತ್ತ ಬದುಕುತ್ತಿರುವ ಆ ಬರಹಗಾರ ಮರೆತಿಹನು, ದಿನವಿಡೀ ನಡೆದು ಹೋಗುವ ಸಮಾಚಾರ! ಕೊರೆಯುತಿರ್ಪುದು ಅವನ ಮತಿಯೊಳು, ನಿನ್ನೆ-ನಾಳೆಗಳ ವಿಚಾರ ಮರುಳಾಗಿ ಎಲ್ಲರ ನಂಬಿ ಆಗಿಬಿಟ್ಟನು, ಅವರನ್ನೇ ನಗಿಸುವ ಹಾಸ್ಯಗಾರ!
----------------------------------
ನೋಂದಣಿ ಐಡಿ : KPFS2-6484