ನಿರರ್ಥಕ
ರಚನೆ : ನಿರಂಜನ್ ಜೈನ್ ಕುದ್ಯಾಡಿ
----------------------------------
ಜೀವಂತ ಇದ್ದಾಗ ಸ್ನಾನ ಮಾಡಿಸದವರು ಹೆಣವಾದಾಗ ಸುಗಂಧ ದ್ರವ್ಯದಿ ಸ್ನಾನ ಮಾಡಿಸಿದರು ಬಟ್ಟೆ ತೊಡುವ ಸಮಯದಿ ಬಟ್ಟೆ ಕೊಡದವರು ಹೆಣವಾದಾಗ ಹೊಸ ಬಟ್ಟೆ ತೊಡಿಸಿದರು ಉಣ್ಣುವ ಸಮಯದಲ್ಲಿ ಊಟ ಹಾಕದವರು ಶ್ರಾದ್ಧದ ಸಮಯದಿ ಬಗೆಬಗೆ ಭಕ್ಷ್ಯಗಳ ಬಡಿಸಿದರು ಸರ್ವರ ಎದುರು ದೂಷಿಸುತ್ತಾ ಇದ್ದವರು ಸತ್ತ ನಂತರ ಹಾಡಿ ಹೊಗಳಿದರು ಹಿರಿಯರೆಂದೂ ನೋಡದೇ ಪ್ರೀತಿ ಕೊಡದವರು ಸತ್ತನಂತರ ದೊಡ್ಡ ಫೋಟೋ ಹಾಕಿ ಹೂ ಹಾಕಿದರು ಕತ್ತಲ ಕೋಣೆಯಲ್ಲಿ ಕೂರಿಸಿ ಹಿಂಸೆ ಕೊಟ್ಟವರು ದಿನಪೂರ್ತಿ ಫೋಟೋಗೆ ದೀಪ ಉರಿಸಿದರು ಇದ್ದಾಗ ಪ್ರೀತಿ ಮಾಡಬೇಕು, ಸೇವೆ ಮಾಡಬೇಕು ಇಲ್ಲದಾಗ ಮಾಡುವ ಉಪಚಾರವೇ ನಿರರ್ಥಕ
----------------------------------
ನೋಂದಣಿ ಐಡಿ : KPFS2-6469